ಟಿಬಿ ಡ್ಯಾಂ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಶುರು

ದಿಗಂತ ವರದಿ ವಿಜಯನಗರ:

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಐದು ದಿನಗಳ ಹಿಂದೆ ಕ್ರಸ್ಟ್ ಗೇಟ್‌ವೊಂದು ಕೊಚ್ಚಿ ಹೋಗಿದ್ದರಿಂದ ಅದೇ ಸ್ಥಳದಲ್ಲಿ ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಗುರುವಾರ ಆರಂಭಗೊಂಡಿದೆ. ಜಲಾಶಯದಿಂದ ಅಪಾರ ಪ್ರಮಾಣದ ನೀರು ಭೋರ್ಗರೆಯುವ ಮಧ್ಯೆಯೇ ತಾತ್ಕಾಲಿಕ ಗೇಟ್ ಅಳವಡಿಸುವ ಸಾಹಸ ಕಾರ್ಯ ನಡೆದಿದೆ.

ಐದು ದಿನಗಳ ಹಿಂದೆ ಜಲಾಶಯದ ೧೯ ನೇ ಕ್ರಸ್ಡ್ ಗೇಟ್ ಕೊಂಡಿ ಕಳಚಿ ಗೇಟ್ ಕೊಚ್ಚಿ ಹೋಗಿದ್ದರಿಂದ ಆ ಜಾಗಕ್ಕೆ ತಾತ್ಕಾಲಿಕವಾಗಿ ಸ್ಟಾಪ್ ಲಾಗ್ ಗೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಗುರುವಾರ ಮಧ್ಯಾಹ್ನ ೧೨.೩೦ ರ ಸುಮಾರಿಗೆ ಕಾಮಗಾರಿ ಆರಂಭಗೊAಡಿದೆ. ತೋರಣಗಲ್‌ನ ಜಿಂದಾಲ್ ತಯಾರಿಸಿರುವ ಎಲಿಮೆಂಟ್‌ನ್ನು ಕ್ರಸ್ಟ್ ಗೇಟ್ ಸ್ಥಳಕ್ಕೆ ಇಳಿಸಲಾಗುತ್ತಿದೆ. ಜಲಾಶಯಗಳ ಸುರಕ್ಷತಾ ಇಂಜಿನಿಯರ್ ಕನ್ನಯ್ಯ ನಾಯ್ಡು ಮಾರ್ಗದರ್ಶನದಲ್ಲಿ ತಜ್ಞ ತಂತ್ರಜ್ಞರು ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದಾರೆ.

ಸ್ಟಾಪ್ ಲಾಗ್‌ಗೇಟ್‌ನ್ನು ಜಲಾಶಯದ ಅಡಿಗೆ ಇಳಿಸಲೆಂದೇ ಸುಮಾರು ೮೦ ಟನ್ ತೂಕವಿರುವ ದೊಡ್ಡ ಕ್ರೇನ್‌ನ್ನು ಜಲಾಶಯದ ಮೇಲೆ ನಿಲುಗಡೆ ಮಾಡಿತ್ತು. ಅದರ ಸಹಾಯದಿಂದ ಜಲಾಶಯದ ೧೯ನೇ ಗೇಟ್ ಜಾಗದಲ್ಲಿ ತಾತ್ಕಾಲಿಕ ಗೇಟ್ ನಿಲ್ಲಿಸುವ ಪ್ರಕ್ರಿಯೆ ಆರಂಭಗೊAಡಿದೆ.

ತಜ್ಞರ ಮಾರ್ಗದರ್ಶನದಲ್ಲಿ ಟಿಬಿ ಬೋರ್ಡ್ ಅಧಿಕಾರಿಗಳು ೪ ಅಡಿ ಎತ್ತರ ಹಾಗೂ ೬೦ ಅಡಿ*೫ ಅಡಿ ಹಗಲ ಅಳತೆಯ ೧೩ ಟನ್ ತೂಕ ಇದು ಹೊಂದಿದೆ. ಇದೇ ಮಾದರಿಯಲ್ಲಿ ಒಟ್ಟು ಐದು ಎಲಿಮೆಂಟ್‌ಗಳನ್ನು ಒಂದಾದ ಮೇಲೊಂದರAತೆ ತಯಾರಿಸಲಾಗುತ್ತಿದೆ. ಅವುಗಳನ್ನು ಹಂತ ಹಂತವಾಗಿ ಜೋಡಿಸುವ ಕೆಲಸ ನಡೆದಿದೆ. ಗುರುವಾರ ಮೊದಲ ಎಲಿಮೆಂಟ್ ಜೋಡಿಸಲಾಗುತ್ತಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!