ಜನವರಿ ತಿಂಗಳಾoತ್ಯದೊಳಗೆ ಪ್ರವಾಸೋದ್ಯಮದ ಹೊಸ ನೀತಿ ಜಾರಿ: ಸಚಿವ ಹೆಚ್.ಕೆ.ಪಾಟೀಲ್

ಹೊಸದಿಗಂತ ವರದಿ,ಮೈಸೂರು:

ಜನವರಿ ತಿಂಗಳಾoತ್ಯದೊಳಗೆ ಪ್ರವಾಸೋದ್ಯಮದ ಹೊಸ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ಭಾನುವಾರ ನಗರದ ಜಿಲ್ಲಾಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ರಚಿಸಿರುವ ನೂತನವಾದ ಬ್ರಾಂಡ್ ಮೈಸೂರು ಲೋಗೋ ಹಾಗೂ ಟ್ಯಾಗ್ ಲೈನ್‌ನನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಸ್ಮಾರಕ ಇದೆ. ಇದರಲ್ಲಿ ಎಲ್ಲವೂ ರಕ್ಷಿಸಲಾಗುತ್ತಿಲ್ಲ. ಕೇವಲ 880 ಸ್ಮಾರಕಗಳನ್ನು ಗುರುತಿಸಿ ರಕ್ಷಣೆ ಮಾಡಲಾಗಿದೆ. ಇದೀಗ 500 ಸ್ಮಾರಕ ಗುರುತಿಸಲಾಗಿದೆ. ಸರ್ಕಾರದಿಂದಲೇ ರಾಜ್ಯದಲ್ಲಿರುವ ಎಲ್ಲಾ ಸ್ಮಾರಕಗಳನ್ನು ರಕ್ಷಿಸುವುದಕ್ಕೆ ಸಾಧ್ಯವಿಲ್ಲ, ಸಾರ್ವಜನಿಕರ ಸಹಭಾಗಿತ್ವ, ಸಹಕಾರವೂ ಬೇಕಾಗುತ್ತದೆ. ಹಾಗಾಗಿ ಸ್ಮಾರಕಗಳನ್ನು ದತ್ತು ಕೊಡಲು ನಿರ್ಧರಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಜಾರಿಗೆ ತರುತ್ತೇವೆ ಎಂದರು.

ವಿದೇಶಗಲ್ಲಿರುವ ಭಾರತೀಯರಿಗೆ ತಮ್ಮ ಜಿಲ್ಲೆ, ಊರಿನ, ಗ್ರಾಮದ ಸ್ಮಾರಕಗಳ ಅಭಿಮಾನದ ಆಸಕ್ತಿ ಇದೆ. ಇದರಿಂದ ಅವರು ತಮ್ಮ ಗ್ರಾಮದ ಅಭಿಮಾನವಿದೆ. ಅಂತಹವರು ತಮ್ಮ ಊರಿನ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಆಸಕ್ತರಾಗಿದ್ದಾರೆ. ಹೀಗಾಗಿ ಸ್ಮಾರಕಗಳನ್ನು ಮುಂದಿನ ದಿನಗಳಲ್ಲಿ ದತ್ತು ತೆಗೆದುಕೊಳ್ಳುವವರಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.

ಹಳೆಬೇಡು ಬೇಲೂರಿನಲ್ಲಿದ್ದ 72 ಸುಂದರಮೂರ್ತಿಗಳನ್ನು ಬ್ರಿಟಿಷರು ತೆಗೆದುಕೊಂಡು ಹೋಗಿ ತಮ್ಮ ದೇಶದ ಮ್ಯೂಸಿಯಂನಲ್ಲಿ ಇಟ್ಟುಕೊಂಡಿದ್ದಾರೆ. ಇದನ್ನು ಮತ್ತೆ ನಮ್ಮ ರಾಜ್ಯಕ್ಕೆ ತರುವ ಬಗ್ಗೆ ಪ್ರಾಮಾಣಿಕವಾಗಿ ಸರ್ಕಾರ ಪ್ರಯತ್ನ ಮಾಡಲಿದೆ. ಈ ನಿಟ್ಟಿನಲ್ಲಿ ಪುರತತ್ವ ಇಲಾಖೆಯ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!