10 ಸಾವಿರ ಮೆಗಾವಾಟ್ ವಿದ್ಯುತ್‌ ಆಮದು: ಭಾರತ-ನೇಪಾಳ ಒಪ್ಪಂದ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ 10 ವರ್ಷಗಳಲ್ಲಿ ಭಾರತಕ್ಕೆ 10,000 ಮೆಗಾವ್ಯಾಟ್ (MW) ಜಲವಿದ್ಯುತ್ ಅನ್ನು ರಫ್ತು ಮಾಡಲು ನೇಪಾಳ ಮತ್ತು ಭಾರತವು ಗುರುವಾರ ವಿದ್ಯುತ್ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದಲ್ಲಿನ ನದಿಗಳಿಂದ ವಾರ್ಷಿಕ 42 ಸಾವಿರ ಮೆಗಾವಾಟ್‌ ಜಲವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಆದರೆ, ತಾಂತ್ರಿಕತೆ ನೆರವು, ಹಣಕಾಸು ಸಂಪನ್ಮೂಲ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ಪ್ರಸ್ತುತ ವಾರ್ಷಿಕ 3000 ಮೆಗಾವಾಟ್ ಉತ್ಪಾದನೆಯಾಗುತ್ತಿದೆ.

ಪ್ರಸ್ತುತ ನೇಪಾಳದ ಜೊತೆಗೆ ಅಲ್ಪಾವಧಿಯ ವಿದ್ಯುತ್‌ ಖರೀದಿ ಒಡಂಬಡಿಕೆ ಹೊಂದಿರುವ ಭಾರತ, ನೇಪಾಳದಲ್ಲಿ ಜಲವಿದ್ಯುತ್‌ ಸ್ಥಾವರಗಳ ಸ್ಥಾಪನೆಗೆ ಕೋಟ್ಯಂತರ ರೂ. ಹೂಡಿಕೆ ಮಾಡುತ್ತಿದೆ. ನೆರೆ ರಾಷ್ಟ್ರದಲ್ಲಿ ತನ್ನ ಪ್ರಭಾವ ಉತ್ತಮಪಡಿಸಿಕೊಳ್ಳುವ ಉದ್ದೇಶವು ಇದೆ. ನೆರೆ ರಾಷ್ಟ್ರ ಚೀನಾ ಗಡಿಯಲ್ಲಿ ಹೆಚ್ಚು ಸಕ್ರಿಯವಾಗಿರುವ ಹಿನ್ನೆಲೆ ಈ ಒಡಂಬಡಿಕೆ ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಪ್ರಧಾನಿ ಪುಷ್ಪಕಮಲ್‌ ದಾಹಲ್‌ ಅವರು ವಿದ್ಯುತ್‌ ಕ್ಷೇತ್ರದಲ್ಲಿ ದೀರ್ಘಾವಧಿ ಒಪ್ಪಂದ ಹೊಂದಲು ಕಳೆದ ವರ್ಷ ಸಮ್ಮತಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಪ್ರೇಮ್‌ ರೈ , ಗುರುವಾರ ಕಠ್ಮಂಡುವಿನಲ್ಲಿ ನಡೆದ ನೇಪಾಳ-ಭಾರತ ಜಂಟಿ ಆಯೋಗದ ಸಭೆಯಲ್ಲಿ ಔಪಚಾರಿಕವಾದ ನಾಲ್ಕು ಒಪ್ಪಂದಗಳಲ್ಲಿ ಹೊಸ ಒಪ್ಪಂದವೂ ಒಂದಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!