ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನಲ್ಲಿ ನಡೆದ ಕ್ರೀಡಾ ಉತ್ಸವದಲ್ಲಿ ಟ್ರ್ಯಾಕ್ಟರ್‌ನಡಿ ಸಿಲುಕಿ ಸ್ಟಂಟ್‌ಮ್ಯಾನ್ ಮೃತಪಟ್ಟಿದ್ದು, ಟ್ರ್ಯಾಕ್ಟರ್ ಸ್ಟಂಟ್ ಸಾಹಸ ಪ್ರದರ್ಶನವನ್ನೇ ಬ್ಯಾನ್ ಮಾಡಲಾಗಿದೆ.
ಪಂಜಾಬ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಗುರುದಾಸ್‌ಪುರದಲ್ಲಿ ನಡೆದ ಭೀಕರ ಅಪಘಾತದಿಂದ ಎಚ್ಚೆತ್ತುಕೊಳ್ಳಲಾಗಿದೆ, ಟ್ರ್ಯಾಕ್ಟರ್ ಬಳಸಿ ಯಾವುದೇ ಸ್ಟಂಟ್ ಮಾಡುವಂದಿಲ್ಲ ಎಂದು ಸಿಎಂ ಭಗವಂತ್ ಮಾನ್ ಹೇಳಿದ್ದಾರೆ.
ಟ್ರ್ಯಾಕ್ಟರ್‌ನ್ನು ಗದ್ದೆಯ ರಾಜ ಎನ್ನಲಾಗುತ್ತದೆ, ಇದನ್ನು ಸಾವಿನ ದೇವರನ್ನಾಗಿ ಮಾಡಬೇಡಿ. ಟ್ರ್ಯಾಕ್ಟರ್ ಬಳಸಿ ಮಾಡುವ ಯಾವುದೇ ಸಾಹಸ ಪ್ರದರ್ಶನವನ್ನು ಪಂಜಾಬ್‌ನಲ್ಲಿ ನಿಷೇಧಿಸಲಾಗಿದೆ ಎಂದಿದ್ದಾರೆ.