May 17, 2026
Sunday, May 17, 2026
spot_img

ರಾಜ್ಯದ ಏರ್ ಕ್ವಾಲಿಟಿಯಲ್ಲಿ ಚೇತರಿಕೆ: ಉಸಿರಾಟಕ್ಕೆ ಸಿಕ್ಕಿದೆ ತುಸು ರಿಲೀಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟದ ಸೂಚ್ಯಂಕದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ದೇಶದ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಪರಿಸ್ಥಿತಿ ತುಸು ಉತ್ತಮವಾಗಿದ್ದರೂ, ಆತಂಕ ಮಾತ್ರ ಇನ್ನೂ ಪೂರ್ಣವಾಗಿ ದೂರವಾಗಿಲ್ಲ.

ಕೆಲವು ದಿನಗಳ ಹಿಂದೆ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದ್ದ ಬೆಂಗಳೂರಿನ ವಾಯು ಗುಣಮಟ್ಟ ಇಂದು 127ಕ್ಕೆ ಸುಧಾರಿಸಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಇದು ಇನ್ನೂ ಆರೋಗ್ಯಕರ ಮಟ್ಟವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಲಬುರ್ಗಿ ಮತ್ತು ಉಡುಪಿಯಲ್ಲಿ ವಾಯು ಗುಣಮಟ್ಟವು 100ಕ್ಕಿಂತ ಕಡಿಮೆ ದಾಖಲಾಗಿದ್ದು, ಅಲ್ಲಿನ ಗಾಳಿಯು ಉಸಿರಾಟಕ್ಕೆ ಯೋಗ್ಯವಾಗಿದೆ. ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲೂ ಪರಿಸ್ಥಿತಿ ಸುಧಾರಣೆಯ ಹಾದಿಯಲ್ಲಿದೆ. ಒಟ್ಟಾರೆಯಾಗಿ ಗಾಳಿಯ ಗುಣಮಟ್ಟದಲ್ಲಿ ಸಣ್ಣ ಏರುಪೇರು ಕಾಣುತ್ತಿದ್ದರೂ, ಸಂಪೂರ್ಣ ಶುದ್ಧ ಗಾಳಿಗಾಗಿ ಇನ್ನೂ ಕಾಯಬೇಕಾದ ಅನಿವಾರ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !