ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದಿಂದ ಪಾಕ್ನಲ್ಲಿ ಸಾಕಷ್ಟು ನಕಾರಾತ್ಮಕ ಬೆಳವಣಿಗೆಗಳಾಗಿವೆ.
ಇಮ್ರಾನ್ ಖಾನ್ ಬೆಂಬಲಿಗರು ಪಾಕ್ನಲ್ಲಿ ಸಾಕಷ್ಟು ದಾಂಧಲೆ ಎಬ್ಬಿಸಿದ್ದು, ಸಿಕ್ಕಸಿಕ್ಕ ಕಡೆ ದಾಳಿ ನಡೆಸುತ್ತಿದ್ದಾರೆ. ಇವರ ವರ್ತನೆ ಅತಿರೇಕಕ್ಕೇರಿದ್ದು, ಲಾಹೋರ್ನ ಕ್ಯಾಂಟ್ನಲ್ಲಿರುವ ಕಾಪ್ಸ್ ಕಮಾಂಡರ್ ಮನೆಗೆ ನುಗ್ಗಿದ್ದಾರೆ.
ಇಮ್ರಾನ್ ಖಾನ್ ಬೆಂಬಲಿಗರು ಮನೆಗೆ ನುಗ್ಗಿ ಮನೆಯಲ್ಲಿದ್ದ ಸಾಕು ಪ್ರಾಣಿಗಳು, ಅಡುಗೆಯನ್ನು ಕದ್ದು ಹೊರಬಂದಿದ್ದಾರೆ. ಇಷ್ಟೇ ಅಲ್ಲಗೆ ಕೈಗೆ ಸಿಕ್ಕ ಎಲ್ಲಾ ವಸ್ತುಗಳನ್ನು ಬಾಚಿಕೊಂಡು ಹೊರಬಂದಿದ್ದಾರೆ. ಇವರೆಲ್ಲರೂ ಮುಖಕ್ಕೆ ಮಾಸ್ಕ್ ಹಾಕಿದ್ದು, ಕೆಲವು ಸಿಸಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಬೆಳಗ್ಗೆಯಷ್ಟೇ ಇಮ್ರಾನ್ ಖಾನ್ ಬೆಂಬಲಿಗರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮನೆಗೆ ನುಗ್ಗಿ ಪೆಟ್ರೋಲ್ ಬಾಂಬ್ಗಳನ್ನು ಎಸೆದಿದ್ದರು.