Thursday, June 1, 2023

Latest Posts

‘ಹೋದ್‌ಸಾರಿನೂ ಕಾಂಗ್ರೆಸ್ ಗೆಲ್ಲತ್ತೆ ಅಂದಿತ್ತು ಸಮೀಕ್ಷೆ, ಆದ್ರೆ ಏನಾಯ್ತು?’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮೀಕ್ಷೆಗಳು ಯಾವಾಗಲೂ ಕಾಂಗ್ರೆಸ್ ಪರವೇ ಇದ್ದಂತೆ ಕಾಣುತ್ತಿದೆ, ಕಳೆದ ಬಾರಿ ಕೂಡ ಕಾಂಗ್ರೆಸ್ ಗೆಲ್ಲುತ್ತದೆ ಅನ್ನೋ ವರದಿ ಬಿಡುಗಡೆ ಆಗಿತ್ತು. ಆದರೆ ಏನಾಯ್ತು? ಅಧಿಕಾರಕ್ಕೆ ಬಂದಿದ್ದು ಬಿಜೆಪಿ ಅಲ್ವಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ 107 ಸ್ಥಾನ ಗಳಿಸುತ್ತದೆ ಅಂತ ಸಮೀಕ್ಷೆ ಹೇಳಿತ್ತು. ಆದರೆ ಎಲ್ಲಾ ಉಲ್ಟಾ ಆಗಿಲ್ವಾ? ಮತದಾರ ಮತ ಹಾಕಿದ್ದು ಆಗಿದೆ, ಇನ್ನು ಫಲಿತಾಂಶ ಹೊರಬೀಳೋದು ಬಾಕಿ ಅಷ್ಟೆ. ನನಗೆ ಸಂಪೂರ್ಣ ನಂಬಿಕೆ ಇದೆ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಶಿಗ್ಗಾವಿ ಜನತೆಗೆ ಎಷ್ಟು ಚಿರಋಣಿ ಎಂದು ಮಾತಿನಲ್ಲಿ ಹೇಳಲಾರೆ, ನನ್ನ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಸದಾ ಋಣಿಯಾಗಿ ಇರುತ್ತೇನೆ, ಸಮೀಕ್ಷೆಗಳು ಏನೇ ಹೇಳಲಿ, ಭರವಸೆಯಿಟ್ಟು ನಿಂತಿದ್ದೇನೆ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಪ್ರಚಾರ ನಡೆಸಿದ್ದು, ಬಿಜೆಪಿಗೆ ಡಬಲ್ ಫ್ಲಸ್ ಆಗಲಿದೆ. ಯುವಕರು, ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ಬಿಜೆಪಿ ಗೆಲ್ಲುವುದರಲ್ಲಿ ಅನುಮಾನ ಬೇಡ. ನಾನು ಎಲ್ಲಿಯೂ 150  ಸ್ಥಾನ ಗೆಲ್ಲುತ್ತೇವೆ ಎಂದು ಹೆಳಿಲ್ಲ. ಬಹುಮತ ಅಂತ ಹೇಳಿದ್ದೆ ಈಗಲೂ ಅದೇ ಹೇಳಿಕೆ ಬದ್ಧನಿದ್ದೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!