ಹೊಸದಿಗಂತ ಡಿಜಿಟಲ್ ಡೆಸ್ಕ್:
2022-23ರಲ್ಲಿ ಆರ್ಥಿಕ ಬೆಳವಣಿಗೆ ಶೇ. 7.2 ಕ್ಕೆ ಏರಿಕೆಯಾಗಿದ್ದು, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ.
ಸಾಕಷ್ಟು ಸಮಸ್ಯೆಗಳು, ಅಂತಾರಾಷ್ಟ್ರೀಯ ಪ್ರತಿಕೂಲಗಳ ನಡುವೆಯೂ ಜಿಡಿಪಿ ದರ 7.2ರಷ್ಟು ಏರಿಕೆ ಕಂಡಿದ್ದು, ಭಾರತ ಆರ್ಥಿಕತೆಯ ಬೆಳವಣಿಗೆಯಲ್ಲಿ ಒಂದನೇ ಸ್ಥಾನದಲ್ಲಿ ಮುಂದುವರಿದಿದೆ.
2022-23 ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ. 6.1ರಷ್ಟು ಬೆಳವಣಿಗೆಯಾಗಿದ್ದು, ವಾರ್ಷಿಕ ಬೆಳವಣಿಗೆ ದರವನ್ನು ಶೇ. 7.2ಕ್ಕೆ ಏರಿಕೆ ಮಾಡಿದೆ. 2021-22ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ ಶೇ. 8.7ರಷ್ಟು ದಾಖಲಾಗಿದೆ.
ಜಿಡಿಪಿ ಬೆಳವಣಿಗೆಯ ಅಂಕಿ ಅಂಶಗಳು ಜಾಗತಿಕ ಸವಾಲುಗಳ ನಡುವೆ ಭಾರತೀಯ ಆರ್ಥಿಕತೆಯ ಸ್ಥಿತಿಸ್ಥಾಪಕತ್ವವನ್ನು ಒತ್ತಿ ಹೇಳುತ್ತಿವೆ. ಆಶಾವಾದ ಹಾಗೂ ಬಲವಾದ ಆರ್ಥಿಕ ಸೂಚಕಗಳಿಂದ ಬೆಳವಣಿಗೆ ಹೊಂದುತ್ತಲೇ ಇದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಅಂಕಿ ಅಂಶ ಕಚೇರಿ ಜಿಡಿಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, 2023-24ರಲ್ಲಿ ಜಿಡಿಪಿ ದರ 6.5%ರಷ್ಟು ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.