ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ದಿನಕ್ಕೊಂದು ಚಿತ್ರವಿಚಿತ್ರ ನಿಯಮಗಳನ್ನು ಹಾಕುತ್ತಿದ್ದಾರೆ.
ಇದೀಗ ಮತ್ತೊಂದು ವಿಚಿತ್ರ ನಿಯಮ ಜಾರಿಗೆ ತಂದಿದ್ದು, ಮಹಿಳೆಯರು ತಮ್ಮ ಗಂಡಂದಿರ ಜತೆ ಫ್ಯಾಮಿಲಿ ಡಿನ್ನರ್ ಕೂಡ ಮಾಡುವಂತಿಲ್ಲ! ಹೌದು…
ಆಫ್ಘನ್‌ನ ಹೆರಾತ್ ಪ್ರಾಂತ್ಯದಲ್ಲಿ ವಾಸಿಸುವವರಿಗೆ ತಾಲಿಬಾನ್ ಈ ನಿಯಮ ಹೇರಿದೆ, ತೆರೆದ ರೆಸ್ಟೋರೆಂಟ್‌ಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎನ್ನಲಾಗಿದೆ. ಲಿಂಗ ಪ್ರತ್ಯೇಕತೆಯ ಯೋಜನೆಯನ್ನು ಇಲ್ಲಿ ಜಾರಿಗೆ ತಂದಿದ್ದು, ಪುರುಷರು ಫ್ಯಾಮಿಲಿ ರೆಸ್ಟೋರೆಂಟ್‌ಗಳಲ್ಲಿಯೂ ಕುಟುಂಬ ಸದಸ್ಯರೊಂದಿಗೆ ತಿನ್ನಲು ಅನುಮತಿ ಇಲ್ಲ.
ಇಷ್ಟೇ ಅಲ್ಲ, ಪುರುಷರು ಹಾಗೂ ಮಹಿಳೆಯರು ಒಟ್ಟಿಗೇ ಉದ್ಯಾನವನಕ್ಕೂ ಹೋಗುವಂತಿಲ್ಲ. ಉದ್ಯಾನವನ ಹಾಗೂ ಹಸಿರು ಪ್ರದೇಶ ಹೊಂದಿರುವ ಯಾವುದೇ ರೆಸ್ಟೋರೆಂಟ್‌ಗೆ ಮಹಿಳೆಯರು ಭೇಟಿ ನೀಡುವಂತಿಲ್ಲ. ಇತ್ತೀಚೆಗೆ ಮಹಿಳೆಯೊಬ್ಬರು ತನ್ನ ಪತಿ ಜತೆ ರೆಸ್ಟೋರೆಂಟ್‌ಗೆ ಹೋಗಿದ್ದರು. ಅಲ್ಲಿಯೂ ಇಬ್ಬರನ್ನು ಪ್ರತ್ಯೇಕವಾಗಿ ಕೂರಿಸಿ ಊಟ ನೀಡಲಾಗಿತ್ತು. ಉದ್ಯಾನವನದಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ದಿನ ಮೀಸಲಿಡಲಾಗಿದೆ. ಗುರುವಾರ, ಶುಕ್ರವಾರ ಹಾಗೂ ಶನಿವಾರ ಮಹಿಳೆಯರು ಪಾರ್ಕ್‌ಗೆ ಬರಬಹುದು, ಪುರುಷರು ಉಳಿದ ದಿನ ಪಾರ್ಕ್‌ಗೆ ಬರಬಹುದು ಎನ್ನಲಾಗಿದೆ.