ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೋಣನಕುಂಠೆ ಠಾಣಾ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆ ವರದಿಯಾಗಿದೆ. 23 ವರ್ಷಗಳ ದಾಂಪತ್ಯ ನಡೆಸಿದ್ದ ವಿಜಯ್ ಕುಮಾರ್ ಹಾಗೂ ಪುಷ್ಪಾ ದಂಪತಿ ಜಗಳದಲ್ಲಿ ಪತ್ನಿಯ ಎಡಗೈ ಬೆರಳುಗಳನ್ನು ಕತ್ತರಿಸಿ ತಿಂದಿದ್ದಾನೆ.
ಹೌದು, ಮದುವೆಯಾದಾಗ ಚೆನ್ನಾಗಿಯೇ ಇದ್ದ ದಂಪತಿ ನಡುವೆ ಇತ್ತೀಚೆಗೆ ಜಗಳಗಳು ಹೆಚ್ಚಾಗಿತ್ತು. ಆತ ಕಿರಿಕಿರಿ ಮಾಡುತ್ತಿದ್ದ ಎಂದು ಪತ್ನಿ ಹೇಳಿದ್ದಾರೆ.
ನನ್ನ ಗಂಡನದ್ದು ವಿಕೃತ ಮನಸ್ಸು, ಕಳೆದ 20 ವರ್ಷಗಳಲ್ಲಿ ನಾನು ಖುಷಿಯಾಗಿ ಇದ್ದದ್ದು ಕೆಲವು ದಿನಗಳು ಮಾತ್ರ, ಇತ್ತೀಚೆಗೆ ಆತನ ಟಾರ್ಚರ್ ತಡೆಯೋಕೆ ಆಗುತ್ತಿರಲಿಲ್ಲ. ಹಾಗಾಗಿ ಆತನನ್ನು ಬಿಟ್ಟು ಮಗನ ಜತೆ ವಾಸಿಸುತ್ತಿದ್ದೆ ಎಂದು ಪತ್ನಿ ಹೇಳಿದ್ದಾರೆ.
ನೆನಪಾಯ್ತು ನೋಡೋಕೆ ಬಂದೆ ಎಂದು ಪತಿ ಮನೆಯೊಳಗೆ ಬಂದಿದ್ದು, ಆಕೆಯ ಜತೆ ಜಗಳ ಮಾಡಿದ್ದಾನೆ. ಸಿಟ್ಟಿನಲ್ಲಿ ಕೈ ಹಿಡಿದುಕೊಂಡು ಕೈ ಬೆರಳುಗಳನ್ನು ಕಚ್ಚಿ ತಿಂದಿದ್ದಾನೆ. ಪುಷ್ಪಾ ಕೋಣನಕುಂಠೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗಂಡನಿಂದ ರಕ್ಷಣೆ ನೀಡಿ ಎಂದಿದ್ದಾರೆ.