Sunday, October 1, 2023

Latest Posts

ಅಂಕೋಲಾದಲ್ಲಿ ಬೈಕ್ ಕಳ್ಳರ ಹಾವಳಿ, ಥಿಯೇಟರ್ ಒಳಗೆ ನಿಲ್ಲಿಸಿದ್ದ ವಾಹನ ಕಳವು

ಹೊಸದಿಗಂತ ವರದಿ ಅಂಕೋಲಾ:

ಪಟ್ಟಣದಲ್ಲಿ ಬೈಕ್ ಕಳ್ಳರು ಮತ್ತೊಮ್ಮೆ ತಮ್ಮ ಕರಾಮತ್ತು ತೋರಿದ್ದು ಸಮರ್ಥ ಚಿತ್ರ ಮಂದಿರದ ಒಳ ಆವರಣದ ಬೈಕ್ ನಿಲುಗಡೆ ಶೆಡ್ಡಿನಲ್ಲಿ ನಿಲ್ಲಿಸಿಟ್ಟ ಬೈಕನ್ನು ಕದ್ದೊಯ್ಯಲಾಗಿದೆ.

ತಾಲೂಕಿನ ಹನುಮಟ್ಟಾ ನಿವಾಸಿ ಕಿರಣ ದೇವಿದಾಸ ನಾಯ್ಕ ಅವರಿಗೆ ಸೇರಿದ ಕೆ.ಎ30 ವಿ 7084 ನೋಂದಣಿ ಸಂಖ್ಯೆ ಇರುವ ಬಜಾಜ್ ಪಲ್ಸರ್ 220 ಸಿ.ಸಿ ಬೈಕನ್ನು ರವಿವಾರ ಮದ್ಯಾಹ್ನ 4 ಗಂಟೆಯಿಂದ 6.45 ರ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಲಾಗಿದೆ.

ಕಿರಣ ಅವರು ಚಲನಚಿತ್ರ ಮಂದಿರದ ಬೈಕ್ ನಿಲುಗಡೆ ಸ್ಥಳದಲ್ಲಿ ತಮ್ಮ ಬೈಕ್ ನಿಲ್ಲಿಸಿ ಆ ಕುರಿತು ರಶೀದಿ ಪಡೆದು ಚಲನ ಚಿತ್ರ ವೀಕ್ಷಿಸಲು ತೆರಳಿದ್ದು ಮುಗಿದ ನಂತರ ಹೊರಬಂದಾಗ ಬೈಕ್ ಇಲ್ಲದಿರುವುದು ಗಮನಕ್ಕೆ ಬಂದಿದೆ ಎಲ್ಲಾ ಕಡೆ ಹುಡುಕಾಟ ನಡೆಸಿ ಬೈಕ್ ಕಳ್ಳತನ ಆಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ತಾಲೂಕಿನ ವಂದಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮತ್ತು ಅಂಕೋಲಾ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಎರಡು ಬೈಕುಗಳ ಕಳ್ಳತನ ಮಾಡಲಾಗಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಬಸ್ ನಿಲ್ದಾಣ, ಚಲನಚಿತ್ರ ಮಂದಿರದಂತ ಸ್ಥಳಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಇಲ್ಲದಿರುವುದು ಇದ್ದರೂ ಅವು ಕೆಲಸ ಮಾಡದಿರುವುದು ಅಪರಾದ ಕೃತ್ಯಗಳನ್ನು ನಡೆಸುವವರಿಗೆ ವರವಾಗಿ ಪರಿಣಮಿಸಿದ್ದು ಈ ಕುರಿತು ಗಮನ ಹರಿಸುವ ಅಗತ್ಯತೆ ಇದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!