ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮರಾಠಿ ಯುವಕರ ಗೂಂಡಾಗಿರಿ ಮುಂದುವರೆದಿದ್ದು, ಕನ್ನಡ ಮಾತಾಡಿದ್ದಕ್ಕೆ ಕರವೇ ತಾಲೂಕು ಉಪಾಧ್ಯಕ್ಷನ ಮೇಲೆ ಹಲ್ಲೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಮೇಲೆ ದಾಳಿಯನ್ನು ನಡೆಸಲಾಗಿದೆ.
ಖಾನಾಪುರದ ಜಾಂಬೋಡಿ ಕ್ರಾಸ್ ಬಳಿಯಲ್ಲಿ ಈ ಘಟನೆ ನಡೆದಿದೆ. ಕನ್ನಡ ಮಾತನಾಡಿದ್ದಕ್ಕಾಗಿ ಕಜಯವಂತ ನಿಡಗಲ್ಕರ್ ಮೇಲೆ ರಕ್ತ ಬರುವಂತೆ ಹಲ್ಲೆಯನ್ನು ಮರಾಠಿ ಯುವಕರು ನಡೆಸಿದ್ದಾರೆ.
ಕರವೇ ಉಪಾಧ್ಯಕ್ಷನ ಮೇಲೆ ಹಲ್ಲೆ ನಡೆಸಿದಂತ ಮರಾಠಿ ಪುಂಡರು, ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದಂತ ಜಯವಂತ ನಿಡಗಲ್ಕರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.