ಛತ್ತೀಸಗಢದಲ್ಲಿ ತಲೆಗೆ 36 ಲಕ್ಷ ಘೋಷಣೆಯಾಗಿದ್ದ 6 ನಕ್ಸಲರು ಶರಣು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ತಲೆಗೆ 36 ಲಕ್ಷ ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಗುರುವಾರ ಶರಣಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸುಕ್ಮಾ ಪೊಲೀಸ್‌ ವರಿಷ್ಠಾಧಿಕಾರಿ ಕಿರಣ್ ಚವಾಣ್ , ದುಧಿ ಪೊಜ್ಜ ಹಾಗೂ ಅವರ ಪತ್ನಿ ದುಧಿ ಪೊಜ್ಜೆ, ಅಯಾಟೆ ಕೊರ್ಸೆ ಅಲಿಯಾಸ್‌ ಜಯಕ್ಕಾ, ಕವಾಸಿ ಮುಡ, ಕರಮ್‌ ನರಣ್ಣ ಅಲಿಯಾಸ್‌ ಭೂಮಾ ಹಾಗೂ ಮಡ್ಕಂ ಸುಕ್ಕ ಅಲಿಯಾಸ್‌ ರೈನು ಶರಣಾದ ನಕ್ಸಲರು.

ಮಾವೋವಾದಿ ಪೀಪಲ್ಸ್‌ ಲಿಬರೇಶನ್‌ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ನಂಬರ್ 1 ಹಾಗೂ ಪೀಪಲ್ಸ್ ಪಾರ್ಟಿ ಕಮಿಟಿ ಸದಸ್ಯರಾಗಿದ್ದ ಪೊಜ್ಜ ಅವರ ತಲೆಗೆ 8 ಲಕ್ಷ ಹಾಗೂ ಅವರ ಪತ್ನಿ ಪೊಜ್ಜೆ ಅವರ ತಲೆಗೂ 8 ಲಕ್ಷ ಬಹುಮಾನ ಘೋಷಣೆಯಾಗಿತ್ತು ಎಂದು ತಿಳಿಸಿದ್ದಾರೆ.

ಕಿಸ್ತರಾಮ್ ಸಮಿತಿಯ ಕಾಮ್ರೆಡ್‌ ಹಾಗೂ ‍ಏರಿಯಾ ಕಮಿಟಿ ಸದಸ್ಯರಾದ ಜಯಕ್ಕ ಅವರ ತಲೆಗೆ 5 ಲಕ್ಷ, ಮುಡ ಹಾಗೂ ಭೂಮಾ ತಲೆಗೆ 15 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ನಕ್ಸಲರಿಗೆ ಪುನರ್ವಸತಿ ಕಲ್ಪಿಸುವ ಜಿಲ್ಲಾ ಪೊಲೀಸರ ‘ಹೊಸ ಉದಯ’ ಯೋಜನೆಯಿಂದ ಪ್ರೇರಣೆಗೊಂಡು ಇವರು ಶರಣಾಗಿದ್ದಾರೆ. ರಾಜ್ಯ ಸರ್ಕಾರದ ಶರಣಾಗತಿ ಹಾಗೂ ಪುನರ್ವಸತಿ ನೀತಿಯಡಿ ಅವರಿಗೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಚವಾಣ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!