ಕುಕ್ಕೆ ಸುಬ್ರಹ್ಮಣ್ಯದಲ್ಲ್ಲಿಧಾರಕಾರ ಮಳೆ: ಇಳೆಗೆ ತಂಪೆರೆದ ಮಳೆರಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕುಕ್ಕೆಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಜೆ ಭಾರೀ ಮಳೆಯಾಗಿದ್ದು, ಗುಡುಗು ಮಿಂಚಿನಿಂದ ಕೂಡಿದ ಧಾರಾಕಾರ ಮಳೆ ಸುರಿದಿದೆ. ಭಾರಿ ಬಿಸಿಲ ಬೇಗೆಯಿದ್ದು ಸುಡುತಿದ್ದ ಸುಬ್ರಹ್ಮಣ್ಯದಲ್ಲಿ ಮಳೆ ಬಂದು ತಂಪಾಯಿತು.

ಸುಮಾರು ಒಂದು ಗಂಟೆಗಳ ಕಾಲ ಭಾರೀ ಗಾಳಿಯೊಂದಿಗೆ ಸಮೃದ್ದ ಮಳೆಯಾಯಿತು. ಈ ಹಿಂದೆ ನಾಲ್ಕು ಸಲ ಮಳೆ ಬಂದಿದ್ದರೂ ಬಿಸಿಲ ಝಲ ಕಡಿಮೆ ಆಗಿಲ್ಲ. ಇಂದು ಸ್ವಲ್ಪ ಜಾಸ್ತಿಯೇ ಮಳೆ ಸುರಿದಿದೆ.ಇದರಿಂದ ಕುಕ್ಕೆಯಲ್ಲಿ ತಂಪಿನ ವಾತಾವರಣ ನಿರ್ಮಿತವಾಗಿತ್ತು.

ಕುಕ್ಕೆ ಮಾತ್ರವಲ್ಲದೆ ಐನೆಕಿದು, ಹರಿಹರ, ಕೊಲ್ಲಮೊಗ್ರು, ಬಾಳುಗೋಡು, ಕಲ್ಲಾಜೆ, ನಡುಗಲ್ಲು, ಗುತ್ತಿಗಾರು, ಒಳಲಂಬೆ, ಪಂಜ, ಕಲ್ಮಡ್ಕ, ಪಂಬೆತ್ತಾಡಿ, ನಿಂತಿಕಲ್ಲು, ಅಲೆಕ್ಕಾಡಿ, ಬಳ್ಪ, ಕೇನ್ಯ, ಯೇನೆಕಲ್ಲು, ಬಿಳಿನೆಲೆ, ನೆಟ್ಟಣ ಪ್ರದೇಶದಲ್ಲಿ ಗುಡುಗು, ಗಾಳಿ ಮಿಶ್ರಿತ ಬಾರೀ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!