ಹೊಸದಿಗಂತ ವರದಿ ಕುಶಾಲನಗರ:
ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಕೆ.ಕೆ.ರಘುಪತಿ ಅವರ ಮೈಸೂರಿನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಕುಶಾಲನಗರದಲ್ಲಿರುವ ಅವರ ಕಚೇರಿಯಲ್ಲೂ ಶೋಧ ನಡೆಸಿದ್ದಾರೆ.
ಮೈಸೂರಿನ ವಿಜಯನಗರ ನಾಲ್ಕನೇ ಹಂತದಲ್ಲಿರುವ ರಘುಪತಿ ಅವರ ನಿವಾಸಕ್ಕೆ ಗುರುವಾರ ಬೆಳಗ್ಗೆ ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಡಿವೈಎಸ್ಪಿ ಮಾಲತೇಶ್, ಕೃಷ್ಣ ಮತ್ತು ತಂಡ ದಾಳಿ ನಡೆಸಿ ಶೋಧ ನಡೆಸಿದ್ದು, ಇತ್ತ ಕುಶಾಲನಗರದಲ್ಲಿರುವ ಹಾರಂಗಿ ಯೋಜನಾ ವೃತ್ತದ ಕಚೇರಿಗೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧಿಸಿದ್ದಾರೆ.