ಪ್ರವಾದಿ ವಿರುದ್ಧ ಹೇಳಿಕೆ| ಮುಸ್ಲಿಂ ರಾಷ್ಟ್ರಗಳಿಂದ ವ್ಯಾಪಕ ವಿರೋಧ, ಭಾರತೀಯ ವಸ್ತುಗಳಿಗೆ ಬಹಿಷ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಬಗ್ಗೆ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆಗಳ ಕಾರಣದಿಂದ ಭಾರತೀಯ ಉತ್ಪನ್ನಗಳು ಕುವೈತ್‌ನಿಂದ ಹೊರಬರಲು ಪ್ರಾರಂಭಿಸಿವೆ. ಈಗಾಗಲೇ ಕುವೈತ್‌ನಲ್ಲಿರುವ ಭಾರತೀಯ ರಾಜತಾಂತ್ರಿಕರ ವಿರುದ್ಧ ಪ್ರತಿಭಟನೆ ನಡೆಸಲು ಸಮನ್ಸ್‌ ಜಾರಿ ಮಾಡಿವೆ. ಇದೀಗ ಅಲ್-ಆರ್ಡಿಯಾ ಸಹಕಾರಿ ಸೊಸೈಟಿಯ ಸದಸ್ಯರು ಕುವೈತ್ ಸಿಟಿಯ ಸೂಪರ್ ಮಾರ್ಕೆಟ್‌ನಲ್ಲಿ ಭಾರತೀಯ ಚಹಾ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡದೆ ಟ್ರಾಲಿಗೆ ಸುರಿದಿದ್ದಾರೆ. ಅಕ್ಕಿ, ಗೋಧಿ ಮತ್ತು ಮೆಣಸಿನ ಕಾಯಿ ಚೀಲಗಳನ್ನು ಸೂಪರ್ ಮಾರ್ಕೆಟ್ ಸಿಬ್ಬಂದಿ ಗೋಡೌನ್‌ಗೆ ಎಸೆದಿದ್ದಾರೆ.

ಭಾರತೀಯ ಉತ್ಪನ್ನಗಳನ್ನು ತೆಗೆದು ಹಾಕಿದ್ದೇವೆ ಎಂದು ಅರೇಬಿಕ್ ಭಾಷೆಯಲ್ಲಿ ಕವರ್‌ ಮೇಲೆ ಬರೆಯಲಾಗಿದೆ. ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ಕುವೈತ್ ಮುಸ್ಲಿಮರು ಕ್ಷಮಿಸುವುದಿಲ್ಲ ಎಂದು ಸೂಪರ್ ಮಾರ್ಕೆಟ್ ನ ಸಿಇಒ ನಜೀರ್ ಅಲ್ ಮುತೈರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕತಾರ್ ಮತ್ತು ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿಗಳಿಗೆ ಸಮನ್ಸ್ ನೀಡಲಾಗಿದ್ದು, ಇರಾನ್ ಕೂಡ ಈ ಸಾಲಿಗೆ ಸೇರಿಕೊಂಡಿದೆ. ಇನ್ನೊಂದೆಡೆ ಭಾರತ ಕ್ಷಮೆಯಾಚಿಸಬೇಕು ಎಂದು ಕತಾರ್ ಆಗ್ರಹಿಸುತ್ತಿದೆ.

ಈಜಿಪ್ಟ್‌ನ ಅಲ್-ಅಝರ್ ವಿಶ್ವವಿದ್ಯಾನಿಲಯ ಪ್ರಕಟಣೆ ಹೊರಡಿಸಿದ್ದು, “ಪ್ರವಾದಿಯವರ ಬಗ್ಗೆ ಇಂತಹ ಟೀಕೆಗಳನ್ನು ಮಾಡುವುದೇ ನಿಜವಾದ ಭಯೋತ್ಪಾದನೆ. ಇಡೀ ಜಗತ್ತು ಬಿಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತದೆ. ಇದು ಯುದ್ಧಗಳಿಗೆ ಕಾರಣವಾಗುತ್ತದೆ” ಎಂದಿದೆ. ಈ ಬಗ್ಗೆ ಸೌದಿ ಮೂಲದ ಮುಸ್ಲಿಂ ವರ್ಲ್ಡ್ ಲೀಗ್ ಕೂಡ ಕೆಂಡಾಮಂಡಲವಾಗಿದ್ದು, ಇದೊಂದು ಹೇಯ ಕೃತ್ಯ, ದ್ವೇಷವನ್ನು ಹುಟ್ಟು ಹಾಕುವ ತಂತ್ರ ಎಂದರು. ಈ ಹಿಂದೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಕೂಡ ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಮುಸ್ಲಿಂ ರಾಷ್ಟ್ರಗಳನ್ನು ಕೆರಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರ ಬಗ್ಗೆ ಅಸಭ್ಯ ಟೀಕೆಗಳನ್ನು ಮಾಡಿದ್ದಕ್ಕಾಗಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಈಗಾಗಲೇ ಭಾರತವನ್ನು ಟೀಕಿಸಿದೆ. ಭಾರತ ಸರ್ಕಾರ ಕೂಡಾ ಈ ವಿಚಾರದ ಬಗ್ಗೆ ಈಗಾಗಲೇ ಖಾರವಾಗಿ ಪ್ರತಿಕ್ರಿಯೆ ನೀಡಿದೆ. ಶರ್ಮಾ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ವಿಚಾರದಲ್ಲಿ ಸುಳ್ಳು ಪ್ರಚಾರ ಮಾಡಬಾರದೆಂದು ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!