ರೈತರಿಗೆ ನೆರವಾಗುವ ದೃಷ್ಟಿಯಿಂದ ಹಾಲು ಖರೀದಿ ದರ ಹೆಚ್ಚಳ ಅನಿವಾರ್ಯ: ಸಚಿವ ರಾಜಣ್ಣ

ಹೊಸದಿಗಂತ ತುಮಕೂರು:

ನಂದಿನಿ ಹಾಲು ಮಾರಾಟದ ದರವನ್ನು ಐದು ರೂಪಾಯಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಾಜಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಯಾವುದೇ ರಾಜ್ಯದಲ್ಲಿ ಕಡಿಮೆ ಬೆಲೆಗೆ ಹಾಲನ್ನು ಖರೀದಿ ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಉದಾಹರಣೆ ಇಲ್ಲ.ನಮ್ಮ ರಾಜ್ಯದಲ್ಲೇ ಅತಿ ಕಡಿಮೆ ಕಡಿಮೆ ಬೆಲೆಗೆ ಹಾಲು ಖರೀದಿಸಲಾಗುತ್ತಿದೆ. ರೈತರಿಗೆ ನೆರವಾಗುವ ದೃಷ್ಟಿಯಿಂದ ಹಾಲು ಖರೀದಿ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದರು.

ಹಾಲಿನ ದರ ಹೆಚ್ಚಳ ಮಾಡಿದ ಸಂಪೂರ್ಣ ಹಣವನ್ನು ರೈತರಿಗೆ ವರ್ಗಾಯಿಸಲಾಗುವುದು. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಿದ್ದು, ಬೆಲೆ ಹೆಚ್ಚಳ ಮಾಡಲು ಸಮ್ಮತಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಾಲು ದರ ಹೆಚ್ಚಳ ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಲಾಭವಾಗುವುದಿಲ್ಲ. ಒಂದು ಲೀಟರ್ ಬಾಟಲಿ ನೀರಿನ ಬೆಲೆಗೆ ಸರಿಸಮನಾಗಿ ಹಾಲಿಗೆ ಬೆಲೆ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ.
ಸಹಕಾರಿ ಸಂಸ್ಥೆಗಳಲ್ಲಿ ವಹಿವಾಟು ಹೆಚ್ಚಾದರೆ ಆದಾಯ ತೆರಿಗೆ ಪಾವತಿಸಲಾಗುತ್ತದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಅನುಕೂಲವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಹಣದ ವಹಿವಾಟು ಹೆಚ್ಚಾದಂತೆ ದೇಶದ ಜಿಡಿಪಿ ಅಧಿಕವಾಗುತ್ತದೆ ಎಂದು ಹೇಳಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. Congress sarakarakke mana maryade Nachike hesige yenadaru ideya yake janara jebige pade pade Kai hakuteerii_ egagale halina Dara omme erisi adannu kmf mandaliye ittukondide matte utpadakarinda kadime belege khareedisuvudu eraderadu kade labha padeyuva kutantra buddi_ Raitaru rochhigeddare e bari nimmannu manege kaluhisuvudantu nischita_ kachita_ karana_ DEEVALIYATTA SAGURIRUVA SARAKARA_ moola_ PUGASATTE BHAGYAGALINDAGI_

LEAVE A REPLY

Please enter your comment!
Please enter your name here

error: Content is protected !!