ಇನ್ ಸ್ಪೈರ್ ಅವಾರ್ಡ್: ರಾಜ್ಯಮಟ್ಟಕ್ಕೆ ಕೊಣಾಜೆಯ ಶ್ರಾವ್ಯ ಎನ್. ಭಟ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಡೆಸುವ “INSPIRE AWARDS -MANAK” 2020-21ನೇ ಸಾಲಿನ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಕೊಣಾಜೆಯ ವಿಶ್ವಮಂಗಳ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಎನ್.ಭಟ್ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಜಿಲ್ಲಾಮಟ್ಟದ online ಸ್ಪರ್ಧೆಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಮಂಗಳೂರು ಇವರು ಆಯೋಜಿಸಿ ಆಯ್ಕೆಯನ್ನು ಮಾಡಿರುತ್ತಾರೆ.ಫೆಬ್ರವರಿ 23 ರಿಂದ 25 ರವರೆಗೆ ನಡೆಯುವ online ಸ್ಪರ್ಧೆಯಲ್ಲಿ ಶಾಲೆಯನ್ನು ಪ್ರತಿನಿಧಿಸಲಿರುವರು.
ಇವರು ಪಾದಲ್ಪಾಡಿ ನರಸಿಂಹ ಭಟ್ ಮತ್ತು ಸುಪ್ರೀತ ಎನ್. ಭಟ್ ದಂಪತಿಯ ಪುತ್ರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!