Saturday, December 9, 2023

Latest Posts

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ’ಪಿಂಕಿ ಎಲ್ಲಿ?’ ಸಿನಿಮಾ ತೆರೆಗೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಪ್ರತಿಷ್ಠಿತ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಹಾಗೂ ಪ್ರಶಂಸೆ ಎರಡನ್ನು ಪಡೆದಿರುವ ‘ಪಿಂಕಿ ಎಲ್ಲಿ?’ ಸಿನಿಮಾ‌ ಜೂ. 2 ರಂದು ರಾಜ್ಯದಲ್ಲಿ ಹಲವು ಜಿಲ್ಲೆಯ ಸಿನಿಮಾ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆಯಾಗಿದ್ದು, ಜನರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಟಿ ಅಕ್ಷತಾ ಪಾಂಡವಪುರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಜ ಆಧಾರಿತ ಸಿನಿಮಾ ಆಗಿದ್ದು, ಬೆಂಗಳೂರಿನ ಕರಳಾ ಹಾಗೂ ಜನರ ಬಗ್ಗೆ ತಿಳಿಸುವುದಾಗಿದೆ.

ಎಂಟು ವರ್ಷದ ಬಾಲಕಿ ಭಿಕ್ಷಾಟನೆಯಲ್ಲಿ ತೊಡಗಿದಾಗ ಅವಳ ಸುತ್ತಮುತ್ತ ನಡೆಯುವ ಸನ್ನಿವೇಶಗಳ ಆಧಾರಿತ ಸಿನಿಮಾ ಆಗಿದೆ ಎಂದರು. ಸಿನಿಮಾದಲ್ಲಿ ದೀಪಕ್‌ ಸುಬ್ರಹ್ಮಣ್ಯ, ಪೃಥ್ವಿ, ಗುಂಜಲಮ್ಮ, ಸಂಗಮ್ಮ ಮುಖ್ಯ ಪಾತ್ರ ಬಿಟ್ಟರೆ ಉಳಿದ ಪಾತ್ರಗಳನ್ನು ಕೊಳಚೆ ಪ್ರದೇಶದ ಜನರು ನಟನೆ ಮಾಡಿದ್ದು, ವಿಶೇಷವಾಗಿದೆ. ಸಿನಿಮಾ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಸಿನಿಮಾವನ್ನು ಪೃಥಿ ಕೋಣನೂರು ನಿರ್ದೇಶಿಸಿದ್ದಾರೆ. ಕೃಷ್ಣೇ ಗೌಡ ನಿರ್ಮಾಣ ಮಾಡಿದ್ದಾರೆ ಎಂದರು.

ಹುಬ್ಬಳ್ಳಿ ಇನರ್ ವೀಲ್ ನ ಕಾರ್ಯದರ್ಶಿ ಸರಸ್ವತಿ ದೊಡ್ಡಮನಿ ಮಾತನಾಡಿ, ಪಿಂಕಿ ಎಲ್ಲಿ ಪ್ರತಿಯೊಬ್ಬರು ನೋಡಬೇಕಾದ ಸಿನಿಮಾ ಆಗಿದೆ. ಅಕ್ಷತಾ ಹಾಗೂ ಅವರ ತಂಡ ಉತ್ತಮ‌ ನಟನೆ ಮಾಡಿದ್ದಾರೆ. ಆದರಿಂದ ಇನ್ನು ಹೆಚ್ಚಿನ‌ ಸಂಖ್ಯೆಯಲ್ಲಿ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ಮಾಜಿ‌ ಅಧ್ಯಕ್ಷ ಉಷಾ ಗೌಡರ, ಪ್ರೀತಿ ಅಗರವಾಲ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!