ಹೊಸ ದಿಗಂತ ವರದಿ, ಮೈಸೂರು:
ಮೋರಿಯೊಂದರಲ್ಲಿ ನವಜಾತ ಶಿಶು ಪತ್ತೆಯಾಗಿರುವ ಘಟನೆ ಮೈಸೂರಿನ ಆರ್ .ಎಸ್.ನಾಯ್ಡು ನಗರದಲ್ಲಿ ನಡೆದಿದೆ.
ಜನಿಸಿ ಎರಡು ದಿನಗಳಾಗಿರುವ ನವಜಾತ ಶಿಶುವಿನ ಶವವನ್ನು ಯಾರೋ ಆರ್‌ಎಸ್ ನಾಯ್ಡು ನಗರದ ಚಾಮುಂಡೇಶ್ವರಿ ದೇವಾಲಯದ ಬಳಿಯಿರುವ ಮೋರಿಗೆ ಎಸೆದು ಹೋಗಿದ್ದಾರೆ.
ಮೋರಿಯಲ್ಲಿ ಶಿಶುವಿನ ಶವವನ್ನು ನೋಡಿದವರು ನೀಡಿದ ಮಾಹಿತಿ ಮೇಲೆ ಸ್ಥಳಕ್ಕೆ ಆಗಮಿಸಿದ ನರಸಿಂಹರಾಜ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ, ಮೋರಿಯಿಂದ ಮಗವಿನ ಶವವನ್ನ ಮೇಲಕ್ಕೇತ್ತಿಸಿ, ಕೆ.ಆರ್.ಆಸ್ಪತ್ರೆಗೆ ಸಾಗಿಸಿದರು. ಪ್ರಕರಣ ದಾಖಲಿಸಿಕೊಂಡು, ಶಿಶುವಿನ ಶವ ಎಸೆದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.