ವಿದ್ಯಾರ್ಥಿಗಳಿಗೆ ತಿಂಡಿಯ ಜೊತೆಗೆ ಸಿಕ್ಕವು ಇಲಿ ಫ್ರೈ ಮಾಡಿದ ಮಾಂಸದ ತುಣುಕುಗಳು!

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ವಿಶ್ವವಿದ್ಯಾನಿಲಯದ ಬ್ಲಾಕ್ 2 ವಿದ್ಯಾರ್ಥಿ ನಿಲಯದಲ್ಲಿ ಬೆಳಗ್ಗೆ ನೀಡಲಾದ ತಿಂಡಿಯಲ್ಲಿ ಇಲಿ, ಅದರ ಮಾಂಸದ ತುಣಕುಗಳು ಪತ್ತೆಯಾಗಿವೆ.
ಬೆಳಗ್ಗೆ ತಿಂಡಿ ತಯಾರಿಸುವಾಗ ಇಲಿ ಬಿದ್ದಿದ್ದು, ಅದನ್ನು ಗಮನಿಸದೆ ತಿಂಡಿಯನ್ನು ಫ್ರೈ ಮಾಡಲಾಗಿದೆ. ಅದರೊಂದಿಗೆ ಇಲಿ ಕೂಡ ಫ್ರೈ ಆಗಿದೆ. ತಿಂಡಿ ತಿನ್ನುತ್ತಿದ್ದ ಕೆಲ ವಿದ್ಯಾರ್ಥಿಗಳಿಗೆ ಇಲಿ ತಲೆ ಬುರುಡೆ, ಅದರ ಮಾಂಸದ ತುಣುಕುಗಳು ಪತ್ತೆಯಾಗಿದ್ದು, ಅದನ್ನು ನೋಡಿದವರು ವಾಂತಿ ಮಾಡಿಕೊಂಡರು.
ಈ ಬೆಳಗಿನ ತಿಂಡಿಯನ್ನು ಇನ್ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಸೇವನೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಇಲಿ ಫ್ರೈ ಮಾಡಿದ್ದ ತಿಂಡಿಯ ತಟ್ಟೆಯನ್ನಿಟ್ಟುಕೊಂಡು ಕ್ಯಾಂಟೀನ್ ಮುಂಭಾಗ ಪ್ರತಿಭಟನೆ ನಡೆಸಿದರು. ಈ ಕ್ಯಾಂಟೀನ್‌ನಲ್ಲಿ ಶುಚಿತ್ವ ಕಾಪಾಡುವುದಿಲ್ಲ, ಆಹಾರದ ಗುಣಮಟ್ಟವೂ ಸರಿಯಾಗಿಲ್ಲ. ಸ್ವಚ್ಚತೆಯಿಲ್ಲದೆ, ಆಹಾರ ತಯಾರಿಸಿ ನೀಡುತ್ತಿದ್ದು, ಅದನ್ನು ಸೇವಿಸುತ್ತಿರುವ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸಗಳಾಗುತ್ತಿವೆ. ಈ ವಿಷಯವನ್ನು ವಿಶ್ವವಿದ್ಯಾಲಯದ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳ ಗೋಳು ತೋಡಿಕೊಂಡಿದ್ದಾರೆ.
ಕ್ಯಾಂಟೀನ್ ವಿರುದ್ಧ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದ ವಿಶ್ವವಿದ್ಯಾಲಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!