ಹೊಸ ದಿಗಂತ ವರದಿ, ಗದಗ :
ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಬಳಿ ರಸ್ತೆ ಕಾಮಗಾರಿಗೆ ಆಗಮಿಸಿದ ನಾಲ್ವರು ಕಾರ್ಮಿಕರು ಬೆಣ್ಣೆಹಳ್ಳಕ್ಕೆ ಸಿಲುಕಿದ್ದರು.ಹಿಗಾಗಿ ತಾಲೂಕಾ ತಹಶೀಲ್ದಾರ ವಾಣಿ ನೇತ್ರತ್ವದ ತಂಡ ಸ್ಥಳಕ್ಕೆ ಧಾವಿಸುವ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ನಾಲ್ವರು ಕಾರ್ಮಿಕರನ್ನು ರಕ್ಷಣೆ ಮಾಡಿದರು.
ಈ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ, ಪೊಲೀಸ್ ಹಾಗೂ ಸ್ಥಳೀಯರ ಸಹಕಾರವನ್ನು ಪಡೆದುಕೊಂಡು ಹಗ್ಗದ ಮೂಲಕ ಹಳ್ಳದಲ್ಲಿ ಸಿಲುಕಿದ್ದ ನಾಲ್ವರನ್ನು ಸಹ ರಕ್ಷಣೆ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಯಿತು.