Saturday, April 1, 2023

Latest Posts

ಮನೆಯ ತೋಟದಲ್ಲಿ ಅಡಿಕೆ ಹೆಕ್ಕಿ ಅಚ್ಚರಿ ಮೂಡಿಸಿದರು ವಿಧಾನಸಭಾಧ್ಯಕ್ಷ ಕಾಗೇರಿ!

ಹೊಸದಿಗಂತ ವರದಿ,ಶಿರಸಿ:

ಇತ್ತೀಚೆಗೆ ಊರ ಹುಡುಗರ ಜೊತೆ ಕ್ರಿಕೆಟ್‌ ಆಡಿ ಸುದ್ಧಿಯಾಗಿದ್ದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಮತ್ತೊಮ್ಮೆ ತಮ್ಮ ಸರಳತೆ ಮೆರೆದು ಸುದ್ಧಿಯಲ್ಲಿದ್ದಾರೆ.
ಜನಮನದ ಸ್ಪೀಕರ್ ಎಂದೇ ಹೆಸರುವಾಸಿಯಾಗಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ತಮ್ಮ ಮನೆಯ ತೋಟದಲ್ಲಿ ಕೆಲಸದ ಆಳುಗಳಂತೆ ಗೊನೆ ಹಿಡಿದ ವಿಡಿಯೋ ವೈರಲ್‌ ಆಗಿದ್ದು, ಅವರ ಜನಸ್ನೇಹ ಸರಳತೆಗೆ ಹಿಡಿದ ಕೈಗನ್ನಡಿಯಾಗಿದೆ. ತಮ್ಮ ವಿಡುವಿನ ವೇಳೆಯಲ್ಲಿ ತಮ್ಮ ಮನೆಯಲ್ಲಿ ಪಕ್ಕಾ ಕೃಷಿಕರಾಗುವ ಸ್ಪೀಕರ್‌ ಕಾಗೇರಿ ಎಲ್ಲರೊಡನೆ ತಾವೂ ಒಬ್ಬರಂತೆ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಅವರ ಬಿಡುವಿನ ವೇಳೆಯಲ್ಲಿ ತಮ್ಮ ಹುಟ್ಟೂರಾದ ಕುಳವೆಯಲ್ಲಿ ಮಕ್ಕಳು, ಊರವರೊಂದಿಗೆ ಸೇರಿ ಕ್ರಿಕೆಟ್ ಆಡಿ ವಿಶೇಷ ಗಮನ ಸೆಳೆದಿದ್ದರು. ಇದರ ವಿಡಿಯೋ ಕೂಡ ಸಾಕಷ್ಟು ವೈರಲ್‌ ಆಗಿತ್ತು. ತಮ್ಮ ಊಟ್ಟುರಿನ ಬರೂರಿನಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲೂ ಪಾಲ್ಗೊಂಡಿರುವ ಅವರು, ಶ್ರಮದಾನ ಸಹ ಮಾಡಿದ ಬಗ್ಗೆಯೂ ಸುದ್ಧಿಯಾಗಿತ್ತು.
ಈ ಹಿಂದೆಯೂ ಸಹ ವಿಧಾನಸಭಾ ಅಧಿವೇಶನ ಹೊರತು ಹಲವಾರು ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರು, ಅಭಿಮಾನಿಗಳ ಜೊತೆ ಬೆರೆತು ಸರಳತೆ ಮೆರೆದಿದ್ದರು. ೬ ಬಾರಿ ಶಾಸಕರಾಗಿ ಮಂತ್ರಿಯಾಗಿ ಕೆಲಸ ಮಾಡಿರುವ ಕಾಗೇರಿ, ಈ ಹಿಂದೆ ಶಿಕ್ಷಣ ಸಚಿವರಾಗಿ ಕೆಲಸ ಮಾಡುವಾಗ ತಮ್ಮ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಾದರಿಯಾಗಿದ್ದರು.
ಸಭಾಧ್ಯಕ್ಷರಿದ್ದಾಗ ೨೨೪ ಶಾಸಕರನ್ನು ನಿಯಂತ್ರಣ ಮಾಡುವ ಕಾಗೇರಿ ಅವರು ಮನೆಗೆ ಬಂದರೆ ಪಕ್ಕಾ ಮನೆನಾಡಿದ ಕೃಷಿಕರಾಗಿ ಎಲ್ಲರೊಂದಿಗೆ ಸೇರಿಕೊಳ್ಳುವುದು ಅವರ ಮೇಲಿನ ಅಭಿಮಾನ ಹೆಚ್ಚುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!