ಮಾರುಕಟ್ಟೆಯಲ್ಲಿ ‘ಖಾದ್ಯ ತೈಲ’ ಬೆಲೆ ಲೀಟರ್‌’ಗೆ 15 ರೂ. ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಮದರ್ ಡೈರಿ ತನ್ನ ಖಾದ್ಯ ತೈಲಗಳ ಬೆಲೆಯನ್ನು ಲೀಟರ್‌ಗೆ 15 ರೂ.ವರೆಗೆ ಕಡಿಮೆ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ ಎಂದು ಮದರ್ ಡೈರಿ ಹೇಳಿದೆ.ಹೊಸ ಎಂಆರ್‌ಪಿಯೊಂದಿಗೆ ಧಾರಾ ಖಾದ್ಯ ತೈಲವು ಮುಂದಿನ ವಾರದ ವೇಳೆಗೆ ಮಾರುಕಟ್ಟೆಗೆ ಬರಲಿದೆ.
ಕಂಪನಿಯು ತನ್ನ ಖಾದ್ಯ ತೈಲಗಳನ್ನ ಧಾರಾ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. ಅದ್ರಂತೆ, ಧಾರಾ ಸಾಸಿವೆ ಎಣ್ಣೆ (ಒಂದು ಲೀಟರ್ ಪಾಲಿ ಪ್ಯಾಕ್) ಬೆಲೆಯನ್ನು ಲೀಟರ್‌ಗೆ 208 ರೂ.ನಿಂದ 193 ರೂ.ಗೆ ಇಳಿಸಲಾಗಿದೆ.
ಧಾರಾ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ (ಒಂದು ಲೀಟರ್ ಪ್ಯಾಕ್) ಈಗ ಪ್ರತಿ ಲೀಟರ್‌ಗೆ 235 ರೂ.ನಿಂದ 220 ರೂ.ಗೆ ಮಾರಾಟವಾಗಲಿದೆ. ಧಾರಾ ಸಂಸ್ಕರಿಸಿದ ಸೋಯಾಬೀನ್ ಎಣ್ಣೆ (1 ಲೀಟರ್ ಪ್ಯಾಕ್) ಬೆಲೆ 209 ರೂ.ನಿಂದ 194 ರೂ.ಗೆ ಇಳಿಕೆಯಾಗಲಿದೆ. ಧಾರಾ ಎಡಿಬಲ್ ಆಯಿಲ್‌ಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್‌ಪಿ) ಲೀಟರ್‌ಗೆ 15 ರೂ.ವರೆಗೆ ಕಡಿಮೆ ಮಾಡಲಾಗುತ್ತಿದೆ ಎಂದು ಮದರ್ ಡೈರಿ ಹೇಳಿಕೆಯಲ್ಲಿ ತಿಳಿಸಿದೆ.

.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!