ಉತ್ತರ ಪ್ರದೇಶದಲ್ಲಿ ಕನಿಷ್ಠ 7 ದಾಖಲೆ ಬರೆದ ಯೋಗಿ !

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉತ್ತರಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಪ್ರಚಂಡ ಜಯದೊಂದಿಗೆ ಕನಿಷ್ಠ ಏಳು ದಾಖಲೆಗಳನ್ನು ಬರೆದಿದ್ದಾರೆ.
ಗೋರಖ್‌ಪುರ ಲೋಕಸಭೆಯಿಂದ ಸತತ ೫ಬಾರಿ ಗೆಲುವು ಸಾಧಿಸಿದ್ದ ಯೋಗಿಯವರು , ಇದೀಗ ಗೋರಖ್‌ಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಶಾಸಕರಾಗಿ 50 ಸಾವಿರ ಮತಗಳ ಬೃಹತ್ ಅಂತರದೊಂದಿಗೆ ಗೆಲುವು ಸಾಧಿಸಿದ್ದಾರೆ.
ದೇಶದ ಅತಿಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರಪ್ರದೇಶ(1952 ಮೇ 20ರಂದು ಅಸ್ತಿತ್ವಕ್ಕೆ ಬಂತು)ದಲ್ಲಿ ಕಳೆದ 70ವರ್ಷಗಳಲ್ಲಿ 21 ಮುಖ್ಯಮಂತ್ರಿಗಳನ್ನು ಕಂಡಿದೆ.ಆದರೆ ಇಷ್ಟು ವರ್ಷಗಳಲ್ಲಿ ೫ವರ್ಷಗಳ ಅವಧಿಪೂರ್ಣಗೊಳಿಸಿ ಎರಡನೇ ಬಾರಿಗೆ ಪುನರಾಯ್ಕೆಗೊಂಡ ಮೊದಲ ಮುಖ್ಯಮಂತ್ರಿಎಂಬ ಕೀರ್ತಿಗೆ ಯೋಗಿಯವರು ಭಾಜನರಾಗಿದ್ದಾರೆ.
*ಸತತ ಎರಡನೇ ಅವಗೆ ಆಯ್ಕೆಯಾದ ೫ನೇ ಮುಖ್ಯಮಂತ್ರಿ (ಈ ಹಿಂದೆ 1957ರಲ್ಲಿ ಸಂಪೂರ್ಣಾನಂದ, 1962ರಲ್ಲಿ ಚಂದ್ರಭಾನು ಗುಪ್ತ, 1974ರಲ್ಲಿ ಹೇಮವತಿ ನಂದನ್ ಬಹುಗುಣ, 1985ರಲ್ಲಿ ನಾರಾಯಣ ದತ್ತ ತಿವಾರಿ)
37ವರ್ಷಗಳಲ್ಲಿ ಎರಡನೇ ಬಾರಿಗೆ ಅಧಿಕಾರ ಉಳಿಸಿಕೊಂಡ ಮೊದಲ ಮುಖ್ಯಮಂತ್ರಿ (ಈ ಹಿಂದೆ 80ರ ದಶಕದಲ್ಲಿ ಎನ್‌ಡಿ ತಿವಾರಿ ಅವರು 2ನೇ ಬಾರಿಗೆ ಆಯ್ಕೆಯಾಗಿದ್ದರು.)
*ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದ ಮೊದಲ ಬಿಜೆಪಿ ಮುಖ್ಯಮಂತ್ರಿ (ಈ ಹಿಂದೆ ಕಲ್ಯಾಣ ಸಿಂಗ್, ರಾಮ್ ಪ್ರಕಾಶ್ ಗುಪ್ತಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದರೂ ಎರಡನೇ ಅವಧಿಗೆ ಆಯ್ಕೆಯಾಗಿರಲಿಲ್ಲ
*15ವರ್ಷಗಳಲ್ಲಿ ವಿಧಾನಸಭೆಗೆ ಚುನಾಯಿತ ಶಾಸಕನಾಗಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ಮೊದಲ ಸಿಎಂ (ಈ ಹಿಂದೆ 2007ರಿಂದ 2012ರವರೆಗೆ ಸಿಎಂ ಆಗಿದ್ದ ಬಿಎಸ್ಪಿ ನಾಯಕಿ ಮಾಯಾವತಿ, 2012ರಿಂದ 2017ರವರೆಗೆ ಸಿಎಂ ಆಗಿದ್ದ ಎಸ್ಪಿ ನಾಯಕ ಅಖಿಲೇಶ್ ಯಾದವ್ ಇಬ್ಬರೂ ವಿಧಾನಪರಿಷತ್ತಿಗೆ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು)
*ಕಳೆದ70ವರ್ಷಗಳಲ್ಲಿ 5ವರ್ಷ ಅವಧಿಪೂರ್ಣ ಮುಖ್ಯಮಂತ್ರಿಯಾಗಿ ಉಳಿದ ಮೂರನೇ ಸಿಎಂ ಎಂಬ ಹೆಗ್ಗಳಿಕೆ (ಈ ಹಿಂದೆ ಮಾಯಾವತಿ 2007ರಿಂದ 2012, ಅಖಿಲೇಶ್ ಯಾದವ್ 2012-2017)

 

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!