ತುಮಕೂರಿನಲ್ಲಿ ಒಂದು ರೂಪಾಯಿಗೆ ಟೀ ಕೊಡ್ತಾರೆ, ಆದ್ರೆ ಒಂದು ಕಂಡೀಷನ್‌!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುವಮತದಾರರನ್ನು ಸೆಳೆಯೋದಕ್ಕೆ ತುಮಕೂರಿನಲ್ಲಿ ವ್ಯಕ್ತಿಯೊಬ್ಬರು ಕೇವಲ ಒಂದು ರೂಪಾಯಿಗೆ ಟೀ ನೀಡುತ್ತಿದ್ದಾರೆ. ಈ ಅಂಗಡಿಯಲ್ಲಿ ಟೀ ಕುಡಿಯಬೇಕು ಅಂದ್ರೆ ಒಂದೇ ಒಂದು ಕಂಡೀಷನ್‌, ವೋಟ್‌ ಹಾಕಿರ್ಬೇಕು ಅಷ್ಟೆ.

ಶೆಟ್ಟಿಹಳ್ಳಿ ಟೀ ಸ್ಟಾಲ್‌ನ ಉಮೇಶ್ ಕುಮಾರ್ ಎನ್ನುವವರು ವಿಭಿನ್ನವಾಗಿ ತಮ್ಮ ಕೈಲಿ ಆದಷ್ಟು ಮತದಾನದ ಅರಿವು ಮೂಡಿಸಲು ಮುಂದಾಗಿದ್ದಾರೆ. ಬೆಳಗ್ಗೆಯಿಂದ ಮತ ಹಾಕಿ ಟೀ ಬಂದ ಮತದಾರರು ಇಲ್ಲಿ ಟೀ ಸವಿಯುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರಗೂ ಉಮೇಶ್ ಕುಮಾರ್ ಟೀ- ಕಾಪಿ ನೀಡಲು ಮುಂದಾಗಿದ್ದಾರೆ. ಉಚಿತ ನೀಡಿದ್ರೆ ಆಮಿಷವೊಡ್ಡಿದ್ದಂತಾಗುತ್ತದೆ ಎಂದು 1 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!