Tuesday, July 5, 2022

Latest Posts

ವಿವಿಧ ಗ್ರಾಮಗಳಲ್ಲಿ ಗ್ರಾಮ ಸಂಚಾರ ನಡೆಸಿದ ಸಚಿವ ಪ್ರಭು ಬಿ.ಚವ್ಹಾಣ್

ಹೊಸ ದಿಗಂತ ವರದಿ, ಬೀದರ್ :

ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಮೇ.28ರಂದು ಜೋಜನಾ, ನಿಡೋದಾ, ಚಿಕ್ಲಿ(ಯು), ಹೊಕ್ರಾಣಾ, ಬಾವಲಗಾಂವ, ಠಾಣಾಕುಶನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಭೇಟಿ ನೀಡದರು.

ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದ ಠಾಣಾಕುಶನೂರ ಗ್ರಾಮದ ಸಿದ್ದಮ್ಮ ಹಣಮಂತ ಚಿಟ್ಟಾ ಅವರು ಇತ್ತೀಚೆಗೆ ಆಕಸ್ಮಿಕವಾಗಿ ಮೃತಪಟ್ಟಿದ್ದರಿಂದ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಅಲ್ಲದೆ ವೈಯಕ್ತಿಕವಾಗಿ ಧನಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಶಿವಕುಮಾರ ಸಜ್ಜನಶೆಟ್ಟಿ, ಬಾಬುರಾವ ವಾಗಮಾರೆ, ಸಚಿನ ರಾಠೋಡ, ವಸಂತ ಜೋಶಿ, ಸತೀಷ ಜೀರ್ಗೆ, ಉಮೇಶ ಜೀರ್ಗೆ, ವೀರೇಂದ್ರ ರಾಜಪೂರೆ, ಮಹೇಶ ಬೋಚ್ರೆ, ಗಿರೀಶ ವಡೆಯರ್, ಧನರಾಜ ಜೀರ್ಗೆ, ಪ್ರಭುರಾವ ಜೀರ್ಗೆ, ಉದಯ ಸೋಲಾಪೂರೆ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss