Monday, October 3, 2022

Latest Posts

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದಲ್ಲಿ 43ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ ಉದ್ಘಾಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್ ಸಭಾ ಮಂಟಪದಲ್ಲಿ ಶುಕ್ರವಾರ ರಾಜ್ಯಮಟ್ಟದ 43ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ ಉದ್ಘಾಟನೆ ಮತ್ತು ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಿತು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಗಳ ಸ್ವಾಮೀಜಿಯವರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭ ಚುಂಚಶ್ರೀ ಪುರಸ್ಕೃತರಾದ ಉತ್ತರ ಕನ್ನಡ ಜಿಲ್ಲೆಯ ಪದ್ಮಶ್ರೀ ತುಳಸಿಗೌಡ (ಪರಿಸರ), ಬೆಂಗಳೂರಿನ ಸಬೇಶ್ ಶಿವಾಚಾರ್ಯ(ಧಾರ್ಮಿಕ ಕ್ಷೇತ್ರ),ಮಂಡ್ಯ ಜಿಲ್ಲೆಯ ಡಾ. ಕೆ.ಎಸ್. ಜಯರಾಮ್ (ಪಶು ವೈದ್ಯಕೀಯ ಸೇವೆ), ಹಾಸನ ಜಿಲ್ಲೆ ಯ ಕಬ್ಬಳಿ ರಂಗೇಗೌಡ (ಸಮಾಜ ಸೇವೆ), ಮೈಸೂರಿನ ಡಾ. ಜಿ. ಗುರುರಾಜ್ (ಜಾನಪದ ಕ್ಷೇತ್ರ) ಅವರನ್ನು ಮಹಾಸ್ವಾಮಿಜಿಯವರು ಗೌರವಿಸಿ ಆಶೀರ್ವದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!