Thursday, July 7, 2022

Latest Posts

ಮೇ.2 ರಂದು ಆಮ್ ಆದ್ಮಿ ಪಕ್ಷದ ಬೀದರ ನಗರ ಕಚೇರಿ ಉದ್ಘಾಟನೆ

ಹೊಸದಿಗಂತ ವರದಿ, ಬೀದರ್
ಆಮ್ ಆದ್ಮಿ ಪಕ್ಷದ ಬೀದರ ನಗರ ಘಟಕದ ನೂತನ  ಕಾರ್ಯಾಲಯವನ್ನು ಮುಂದಿನ ಭಾನುವಾರ (ಮೇ.1) ರಂದು ಉದ್ಘಾಟನೆ ನೆರವೇರಿಸಿಲಾಗುತ್ತದೆ.
ಈ ಕುರಿತು ಜಿಲ್ಲಾ ಆಪ್ ಉಪಾಧ್ಯಕ್ಷ ರಾದ ಜಮೀಲ್ ಸಾಬ್ ಹಾಗೂ ಸಿದ್ದು ಫುಲಾರಿ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಆಪ್ ಅಧ್ಯಕ್ಷ ದೀಪಕ್ ಮಾಲಗಾರ್ ಅವರು ಕಾರ್ಯಾಲಯ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಂದು ಬೆಳಿಗ್ಗೆ ನಗರದಲ್ಲಿ ಕಾರ್ಯಕರ್ತರ ಪಾದಯಾತ್ರೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ನಗರದ ಬಸವೇಶ್ವರ ಚೌಕ್ ನಿಂದ ಆರಂಭಗೊಳ್ಳುವ ಪಾದಯಾತ್ರೆ ಅಂಬೇಡ್ಕರ್ ವ್ರತ, ಶಿವಾಜಿ ಚೌಕ್, ಹರಳಯ್ಯ ಚೌಕದಿಂದ ನಗರಸಭೆಯ ಹೂವಿನ ಅಂಗಡಿಗಳ ಸಂಕೀರ್ಣ ದಲ್ಲಿರುವ ಅಂಗಡಿಯೊಂದರಲ್ಲಿ ಈ ಕಚೇರಿಗೆ ತಲುಪಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ.
ಆಮ್ ಆದ್ಮಿ‌ಪಕ್ಷದ ಎಲ್ಲಾ ಸದಸ್ಯರು ಹಾಗೂ ಹಿತಚಿಂತಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss