Sunday, June 4, 2023

Latest Posts

ಪ್ರಧಾನಿ ಮೋದಿಯಿಂದ ನೂತನ ಸಂಸತ್​ ಭವನ ಉದ್ಘಾಟನೆ: ಕ್ಯಾತೆ ತೆಗೆದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೆಂಟ್ರಲ್​ ವಿಸ್ಟಾ ಯೋಜನೆಯಡಿ ನಿರ್ಮಿಸಲಾದ ನೂತನ ಸಂಸತ್​ ಭವನ (New Parliament Building)ವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಉದ್ಘಾಟನೆ ಮಾಡುತ್ತಾರೆ ಎಂದು ಹೇಳಲಾಗಿತ್ತು.

ಇದೀಗ ಆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕ್ಯಾತೆ ತೆಗೆದಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿದ ಅವರು ‘ನೂತನ ಸಂಸತ್​ ಭವನವನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಬೇಕು ಹೊರತು ಪ್ರಧಾನಮಂತ್ರಿ ಮಾಡಬಾರದು’ ಎಂದು ಹೇಳಿದ್ದಾರೆ.

ನೂತನ ಸಂಸತ್​ ಭವನವನ್ನು ಪ್ರಧಾನಿ ನರೇಂದ್ರ ಮೋದಿಯರು ಉದ್ಘಾಟನೆ ಮಾಡಲಿದ್ದಾರೆ. ಲೋಕಸಭೆ ಸ್ಫೀಕರ್​ ಓಂ ಬಿರ್ಲಾ ಅವರು ಈಗಾಗಲೇ ಪ್ರಧಾನಿಯನ್ನು ಭೇಟಿಯಾಗಿ ಆಹ್ವಾನ ನೀಡಿದ್ದಾರೆ ಎಂದು ಮೇ 18ರಂದು ಲೋಕಸಭೆ ಸಚಿವಾಲಯ ತಿಳಿಸಿತ್ತು. ಅದರ ಬೆನ್ನಲ್ಲೇ ಪ್ರತಿಪ್ರಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೊಸ ಸಂಸತ್​ ಭವನವನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಬೇಕೇ ಹೊರತು ಸರ್ಕಾರ ಮುಖ್ಯಸ್ಥರಲ್ಲ ಎನ್ನುತ್ತಿದ್ದಾರೆ.

ಮೇ 19ರಂದು ಟ್ವೀಟ್ ಮಾಡಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ‘ಪ್ರಧಾನಿಯವರು ಯಾಕೆ ನೂತನ ಸಂಸತ್​ ಭವನ ಉದ್ಘಾಟನೆ ಮಾಡುತ್ತಿದ್ದಾರೆ? ಪ್ರಧಾನಿಯವರು ಕಾರ್ಯಾಂಗದ ಮುಖ್ಯಸ್ಥರೇ ಹೊರತು ಶಾಸಕಾಂಗಕ್ಕೆ ಮುಖ್ಯಸ್ಥರಲ್ಲ. ಈ ಸಂಸತ್​ ಭವನವನ್ನು ಲೋಸಕಭೆ ಸ್ಪೀಕರ್​ ಅಥವಾ ರಾಜ್ಯಸಭಾ ಅಧ್ಯಕ್ಷರು ಉದ್ಘಾಟಿಸಬಹುದು. ಇದನ್ನು ಸಾರ್ವಜನಿಕರ ಹಣದಿಂದಲೇ ಕಟ್ಟಲಾಗಿದೆ. ಆದರೆ ಅದ್ಯಾಕೆ ಪ್ರಧಾನಿಯವರು ಹೀಗಾಡುತ್ತಿದ್ದಾರೆ. ಅವರ ಸ್ನೇಹಿತರು ತಮ್ಮ ಖಾಸಗಿ ಹಣದಿಂದ ನೂತನ ಸಂಸತ್ ಭವನ ಕಟ್ಟಿಸಿದಂತೆ ಆಡುತ್ತಿದ್ದಾರಲ್ಲ’ ಎಂದು ವ್ಯಂಗ್ಯವಾಡಿದ್ದರು.

ತೃಣಮೂಲ ಕಾಂಗ್ರೆಸ್ ಸಂಸದ ಸುಖೇಂದು ಸೇಖರ್​ ರಾಯ್​ ಅವರು, ನೂತನ ಸಂಸತ್ ಭವನವನ್ನು ವೀರ ಸಾವರ್ಕರ್ ಜನ್ಮದಿನದಂದೇ ಉದ್ಘಾಟನೆ ಮಾಡುವುದನ್ನು ವಿರೋಧಿಸಿದ್ದರು.

ನೂತನ ಸಂಸತ್ ಭವನ ಮೇ 28ಕ್ಕೆ, ಸಾವರ್ಕರ್ ಜಯಂತಿಯಂದು ಉದ್ಘಾಟನೆಯಾಗುತ್ತಿರುವುದು ಮಹಾತ್ಮ ಗಾಂಧಿ, ಜವಾಹರ್​ಲಾಲು ನೆಹರು, ಸುಭಾಷ್ ಚಂದ್ರ ಬೋಸ್​ ಮತ್ತಿತರರಿಗೆಲ್ಲ ಅವಮಾನ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!