Thursday, September 29, 2022

Latest Posts

ಅ.11ಕ್ಕೆ ಪ್ರಧಾನಿ ಮೋದಿಯಿಂದ ಉಜ್ಜಯಿನಿ ಮಹಾಕಾಲ್ ಕಾರಿಡಾರ್ ಲೋಕಾರ್ಪಣೆ, ಕಾರಿಡಾರ್‌ನ ವಿಶೇಷತೆಗಳೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯದ ನೂತನ ಕಾರಿಡಾರ್‌ನ್ನು ಅ.11ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಬಹುನಿರೀಕ್ಷಿತ ಉಜ್ಜಯಿನಿ ಮಹಾಕಾಲ್ ಕಾರಿಡಾರ್‌ನ ಯೋಜನೆಯ ಮೊದಲ ಹಂತ ಶೀಘ್ರ ಪೂರ್ಣಗೊಳ್ಳಲಿದೆ. ಪ್ರಧಾನಿ ಮೋದಿ ಉಜ್ಜಯಿನಿಗೆ ಭೇಟಿ ನೀಡಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಉದ್ಘಾಟನೆ ಮಾಡಲಿದ್ದಾರೆ.

ಯೋಜನೆಯ ವಿಶೇಷತೆಗಳೇನು?

  • ಮೊದಲ ಹಂತದಲ್ಲಿ 900 ಮೀಟರ್ ಉದ್ದದ ಕಾರಿಡಾರ್,ಥೀಮ್ ಪಾರ್ಕ್, ಹೆರಿಟೇಜ್ ಮಾಲ್, ಇ-ಟ್ರಾನ್ಸ್‌ಪೋರ್ಟ್ ಸೌಕರ್ಯ
  • ಎರಡನೇ ಹಂತದಲ್ಲಿ ಮಹಾರಾಜವಾಡಾ ಶಾಲಾ ಭವನವನ್ನು ಪಾರಂಪರಿಕ ಧರ್ಮಶಾಲೆಯಾಗಿ ಪರಿವರ್ತಿಸುವುದು
  • ರುದ್ರಸಾಗರ ಮತ್ತು ಶಿಪ್ರಾ ನದಿ ಜೋಡಣೆ
  • ಸರೋವರ ಪ್ರದೇಶದ ಸೌಂದರ್ಯ ವರ್ಧನೆ
  • 350 ಕಾರುಗಳಿಗೆ ಪಾರ್ಕಿಂಗ್ ಅವಕಾಶ
  • ರುದ್ರಸಾಗರ ಮೇಲೆ 210 ಮೀಟರ್ ತೂಗುಸೇತುವೆ
  • ಡೈನಾಮಿಕ್ ಲೈಟ್ ಶೋ ವ್ಯವಸ್ಥೆ

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!