ಭಾರತದ ತಪ್ಪಾದ ನಕ್ಷೆಯ ವಿಡಿಯೋ ಡಿಲೀಟ್: ಕ್ಷಮೆಯಾಚಿಸಿದ WhatsApp​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಾಟ್ಸ್​ಆ್ಯಪ್ ಭಾರತದ ತಪ್ಪಾದ ನಕ್ಷೆಯ ವಿಡಿಯೋ ಹಂಚಿಕೊಂಡ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದಂತೆ ವಿಡಿಯೋವನ್ನು ಅಳಿಸಿ ಕ್ಷಮೆಯಾಚಿಸಿದ್ದಾರೆ .

ಭಾರತದ ನಕ್ಷೆಯ ದೋಷವನ್ನು ಸರಿಪಡಿಸಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಟ್ವಿಟರ್ ಮೂಲಕ ಮನವಿ ಮಾಡಿದ ಬೆನ್ನಲ್ಲೆ ವಾಟ್ಸ್​ಆ್ಯಪ್ ಕ್ಷಮೆಯಾಚಿಸಿದೆ. ಜೊತೆಗೆ ವಿಡಿಯೋವನ್ನು ಅಳಿಸಿದೆ.

ಆತ್ಮೀಯ ವಾಟ್ಸಾಪ್ – ದಯವಿಟ್ಟು ಭಾರತ ನಕ್ಷೆಯ ದೋಷವನ್ನು ಆದಷ್ಟು ಬೇಗ ಸರಿಪಡಿಸಲು ವಿನಂತಿ ಎಂದು ಸಚಿವರು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, “ಭಾರತದಲ್ಲಿ ವ್ಯಾಪಾರ ಮಾಡುವ ಮತ್ತು ಭಾರತದಲ್ಲಿ ವ್ಯಾಪಾರವನ್ನು ಮುಂದುವರಿಸಲು ಬಯಸುವ ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಸರಿಯಾದ ನಕ್ಷೆಗಳನ್ನು ಬಳಸಬೇಕು” ಎಂದು ಸೂಚಿಸಿದ್ದರು.

ಇದೀಗ ವಾಟ್ಸಾಪ್ ತಪ್ಪು ನಕ್ಷೆಯೊಂದಿಗೆ ಟ್ವೀಟ್ ಅನ್ನು ಹಿಂತೆಗೆದುಕೊಂಡಿದೆ ಮತ್ತು ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದೆ. ಉದ್ದೇಶಪೂರ್ವಕವಲ್ಲದ ದೋಷವನ್ನು ಸೂಚಿಸಿದ್ದಕ್ಕಾಗಿ ಸಚಿವರಿಗೆ ಧನ್ಯವಾದಗಳು; ನಾವು ತಕ್ಷಣವೇ ಸ್ಟ್ರೀಮ್ ಅನ್ನು ತೆಗೆದುಹಾಕಿದ್ದೇವೆ, ಕ್ಷಮೆಯಾಚಿಸುತ್ತೇವೆ. ಭವಿಷ್ಯದಲ್ಲಿ ನಾವು ಜಾಗರೂಕರಾಗಿರುತ್ತೇವೆ ಎಂದು ಕಂಪನಿಯು ಟ್ವಿಟರ್‌ನಲ್ಲಿ ಹೇಳಿಕೊಂಡಿದೆ.

ಹೊಸ ವರ್ಷದ ಮುನ್ನಾದಿನದ ಲೈವ್‌ಸ್ಟ್ರೀಮ್ ಕುರಿತು WhatsApp ಮಾಡಿದ ವೀಡಿಯೊ ಪೋಸ್ಟ್ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ತಪ್ಪಾದ ನಕ್ಷೆಯನ್ನು ತೋರಿಸಿರುವ ಭೂಗೋಳವನ್ನು ಚಿತ್ರಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!