ರೆಪೋದರದಲ್ಲಿ ಮತ್ತೆ ಹೆಚ್ಚಳ: ಆರ್‌ಬಿಐ ಏರಿಕೆ ಮಾಡಿದ್ದೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೋದರವನ್ನು ಮತ್ತೆ ಏರಿಕೆ ಮಾಡಿದ್ದು 50 ಬೇಸಿಸ್ ಪಾಯಿಂಟ್ (ಬಿಎಸ್‌ಪಿ) ಅಂದರೆ 5.4 ಕ್ಕೆ ರೆಪೋದರ ಏರಿಕೆಯಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದ್ದು ಈ ಮಟ್ಟವು ಸಾಂಕ್ರಾಮಿಕ ಪೂರ್ವದ ಶೇಕಡಾ 5.15ರ ಮಟ್ಟವನ್ನು ದಾಟಿದೆ.

ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿಯ ಕುರಿತು ಚರ್ಚಿಸಲು ಆರ್‌ಬಿಐನ ದರ ನಿಗದಿ ಸಮಿತಿ ಮತ್ತು ಹಣಕಾಸು ನೀತಿ ಸಮಿತಿ (ಎಂಪಿಸಿ)ಗಳು ಆಗಸ್ಟ್ 3 ರಿಂದ ಮೂರು ದಿನಗಳ ಕಾಲ ಸಭೆ ಸೇರಿದ್ದವು. ಸಭೆಯ ನಂತರದಲ್ಲಿ ಈ ಘೋಷಣೆಗಳನ್ನು ಮಾಡಲಾಗಿದ್ದು ಹಣದುಬ್ಬರವನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ನಿರ್ಧಾರದಂತೆ ಸ್ಥಾಯಿ ಠೇವಣಿ ಸೌಲಭ್ಯ (SDF) ದರವನ್ನು 5.15 ಪ್ರತಿಶತಕ್ಕೆ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಮತ್ತು ಬ್ಯಾಂಕ್ ದರವನ್ನು 5.65 ಪ್ರತಿಶತಕ್ಕೆ ಹೊಂದಿಸಲಾಗಿದೆ. 2022-23 ರ ನೈಜ GDP ಬೆಳವಣಿಗೆಯ Q1 – 16.2 ಶೇಕಡಾ, Q2 – 6.2 ಶೇಕಡಾ, Q3 – 4.1 ಶೇಕಡಾ ಮತ್ತು Q4 – 4 ಶೇಕಡಾ ಅಪಾಯಗಳೊಂದಿಗೆ 7.2 ಶೇಕಡಾದಲ್ಲಿ ಉಳಿಸಿಕೊಳ್ಳಲಾಗಿದೆ. ಇದಲ್ಲದೆ, Q1 2023-24 ರ ನೈಜ GDP ಬೆಳವಣಿಗೆಯನ್ನು 6.7 ಶೇಕಡಾ ಎಂದು ನಿರೀಕ್ಷಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಆರ್‌ಬಿಐನ ಮೂರನೇ ದರ ಏರಿಕೆಯಾಗಿದ್ದು ಮೇ ತಿಂಗಳಿನ ತನ್ನ ಆಫ್-ಸೈಕಲ್ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ ಅಂದರೆ 0.40 ಶೇಕಡಾದಿಂದ 4.40 ಕ್ಕೆ ಹೆಚ್ಚಿಸಿತ್ತು ನಂತರ ಜೂನ್‌ನಲ್ಲಿ ದರವನ್ನು 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳದೊಂದಿಗೆ ಶೇಕಡಾ 4.90 ಕ್ಕೆ ಏರಿಸಲಾಗಿತ್ತು. ಶೇಕಡಾ 6 ಕ್ಕಿಂತ ಹೆಚ್ಚಿನ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್ ಮತ್ತು ಸರ್ಕಾರ ಎರಡೂ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮೂಲಗಳು ವರದಿ ಮಾಡಿವೆ.

 

ರೆಪೋದರದ ಕುರಿತಾಗಿ ಹೆಚ್ಚಿನ ಮಾಹಿತಿ ಈ ಲಿಂಕ್‌ನಲ್ಲಿ ಲಭ್ಯವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!