ಹೊಸದಿಗಂತ ವರದಿ ಗದಗ :
ಅವಳಿ ನಗರದಲ್ಲಿ ಚಾಕು ಇರಿತ ಪ್ರಕರಣಗಳು ಹೆಚ್ಚಾಗಿವೆ. ಈ ಕಾರಣಕ್ಕಾಗಿ ಬೆಳ್ಳಂಬೆಳಗ್ಗೆ ಪೊಲೀಸರು ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳ ಮನೆಗೆ ತೆರಳಿ ಎಚ್ಚರಿಕೆ ನೀಡಿ ಬಂದಿದ್ದಾರೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್ ನೇತೃತ್ವದಲ್ಲಿ ತಪಾಸಣೆ ನಡೆಸಿ ಎಚ್ಚರಿಕೆ ನೀಡಿದರು.
ನಗರದ ಕಮ್ಮಾರ ಸಾಲ, ರಂಗನವಾಡ ಗಲ್ಲಿಯ ಅನುಮಾನಾಸ್ಪದ ಮನೆಗಳಲ್ಲಿ ತಪಾಸಣೆ ನಡೆಸಿದರು. ಕಮ್ಮಾರಸಾಲ ಕೆಲ ಮನೆಗಳಲ್ಲಿ ಚಾಕೂ, ಕಂದ್ಲಿಗಳು, ರಾಡ್ ಹಾಗೂ ರಂಗನವಾಡದ ಮನೆಯೊಂದರಲ್ಲಿ ಜಿಂಕೆ ಕೊಂಬು, ದೊಡ್ಡ ಗಾತ್ರದ ಗರಗಸ ರೀತಿಯ ಚಾಕು ಪತ್ತೆಯಾಗಿದ್ದು ಅವುಗಳನ್ನು ವಶಪಡೆಸಿಕೊಂಡರು. ಬೆಳ್ಳಂಬೆಳಗ್ಗೆ ನೂರಾರು ಪೊಲೀಸರ ಬೂಟಿನ್ ಸದ್ದು ಕೇಳಿ ಜನರು ಬೆಚ್ಚಿದರು. ಇಬ್ಬರು ಸಿಪಿಐ, ಪಿಎಸ್ಐ ಸೇರಿದಂತೆ ಶಹರ ಪೊಲೀಸ್ ಠಾಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ನೂರಾರು ಪೊಲೀಸರ ಕಾರ್ಯಾಚರಣೆ ನಡೆಸಿದರು.