ವೈರಲ್‌ ಜ್ವರದ ಹೆಚ್ಚಳ ಕೋವಿಡ್‌ ರೂಪಾಂತರವಾ! ಏನೆಂದಿತು ವಿಶ್ವ ಆರೋಗ್ಯ ಸಂಸ್ಥೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದೆಲ್ಲೆಡೆ ಹೆಚ್ಚುತ್ತಿರುವ ವೈರಲ್‌ ಜ್ವರಗಳು ಎಲ್ಲರನ್ನೂ ಚಿಂತೆಗೀಡು ಮಾಡುತ್ತಿದೆ. ಕರೋನಾ ವೈರಸ್ ಜೆಎನ್ 1 ಉಪ-ರೂಪಾಂತರ ಬಿಎ 2.86  ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜ್ವರದಿಂದ ಬಳಲುತ್ತಿರುವವರು ಜಾಗರೂಕರಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ವೈರಲ್ ಜ್ವರಗಳ ಹೆಚ್ಚಳವು ಹೊಸ ಕೋವಿಡ್ ರೂಪಾಂತರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳವನ್ನು ಹೆಚ್ಚಿಸಿದೆ.

ಉತ್ತರ-ಪಶ್ಚಿಮ ಯುರೋಪಿಯನ್ ದೇಶವಾದ ಲಕ್ಸೆಂಬರ್ಗ್‌ನಲ್ಲಿ ಮೊದಲು ಪತ್ತೆಯಾದ JN1 ಕೋವಿಡ್ ಪ್ರಕರಣಗಳು ಈಗಾಗಲೇ ಇಂಗ್ಲೆಂಡ್, ಫ್ರಾನ್ಸ್, ಐಸ್ಲ್ಯಾಂಡ್ ಮತ್ತು ಅಮೆರಿಕಕ್ಕೆ ಹರಡಿವೆ. ಕೋವಿಡ್‌ನ ಈ ಹೊಸ ರೂಪಾಂತರದ ತ್ವರಿತ ಹರಡುವಿಕೆಯ ದೃಷ್ಟಿಯಿಂದ ಜನರು ಎಚ್ಚರವಾಗಿರುವಂತೆ ಡಬ್ಲ್ಯೂಹೆಚ್‌ಒ ಸಲಹೆ ನೀಡಿದೆ.

ಭಾರತದಲ್ಲಿ JN1 ಕೋವಿಡ್ ಸಾಂಕ್ರಾಮಿಕ ಪ್ರಕರಣಗಳು ವರದಿಯಾಗಿಲ್ಲವಾದರೂ, ಡೆಂಗ್ಯೂ, ಮಲೇರಿಯಾ ಮತ್ತು ಟೈಫಾಯಿಡ್‌ನಂತಹ ವಿವಿಧ ವೈರಲ್ ಜ್ವರದಂತಹ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಚಳಿಗಾಲದಲ್ಲಿ ವೈರಲ್ ಜ್ವರಗಳ ವಿರುದ್ಧ ಜನರು ಜಾಗೃತರಾಗಬೇಕು. ಜೆಎನ್ 1 ಕರೋನಾ ವೈರಸ್‌ನ ಲಕ್ಷಣಗಳು ಶೀತ, ಎದೆ ನೋವು, ಉಸಿರಾಟದ ತೊಂದರೆ ಮತ್ತು ಜ್ವರ ಎಂದು ವೈದ್ಯರ ತಂಡ ಬಹಿರಂಗಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!