ಆಭರಣ ಪ್ರಿಯರಿಗೆ ಆಘಾತ, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೀಪಾವಳಿ ಹಬ್ಬದಂದು ಚಿನ್ನ ಖರೀದಿಸಲು ತಯಾರಿ ನಡೆಸುತ್ತಿರುವವರಿಗೆ ಶನಿವಾರ ಬೆಳ್ಳಂಬೆಳಗ್ಗೆಯೇ ಶಾಕಿಂಗ್ ಸುದ್ದಿ. ಕಳೆದ ನಾಲ್ಕು ದಿನಗಳಿಂದ ದೇಶದಲ್ಲಿ ಕಡಿಮೆಯಾಗುತ್ತಿದ್ದ ಚಿನ್ನದ ಬೆಲೆ ಶನಿವಾರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಶನಿವಾರ ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ..10 ಗ್ರಾಂ 22ಕ್ಯಾರೆಟ್ ಚಿನ್ನದ ಮೇಲೆ ರೂ. 300 ಏರಿಕೆ, 24 ಕ್ಯಾರೆಟ್ 10 ಗ್ರಾಂ ಚಿನ್ನ 330 ರೂ. ಬೆಳ್ಳಿ ಬೆಲೆಯೂ ದಿಢೀರ್ ಏರಿಕೆಯಾಗಿದೆ. ಮೂರು ದಿನಗಳಿಂದ ಒಂದು ಕಿಲೋ ಬೆಳ್ಳಿ ರೂ. 2 ಸಾವಿರ ಕಡಿಮೆಯಾಗಿತ್ತು. ಆದರೆ ಇಂದು ಬೆಳಗ್ಗೆ ಪ್ರತಿ ಕೆಜಿ ಬೆಳ್ಳಿಗೆ ರೂ.800 ಏರಿಕೆಯಾಗಿದೆ.

Gold

ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ

  • ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 56,150 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 61,24ರೂಗೆ ಏರಿಕೆಯಾಗಿದೆ.
  • ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 56,000ರೂ. , 24 ಕ್ಯಾರೆಟ್ ಚಿನ್ನದ ಬೆಲೆ ರೂ. 61,090 ತಲುಪಿದೆ.
  • ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ರೂ.56,450 ಆಗಿದ್ದರೆ, 24 ಕ್ಯಾರೆಟ್ ಚಿನ್ನ ರೂ.61,580 ತಲುಪಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ರೂ. 56,000, 10 ಗ್ರಾಂ 24 ಕ್ಯಾರೆಟ್ ಚಿನ್ನ ರೂ. 61,090ಕ್ಕೆ ಏರಿಕೆಯಾಗಿದೆ.

Gold

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ

ಬೆಳ್ಳಿ ಬೆಲೆ ಸಾಕಷ್ಟು ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಒಂದು ಕಿಲೋ ಬೆಳ್ಳಿ ರೂ. 2,000 ಕಡಿಯಾಗಿತ್ತು. ಶನಿವಾರ ಕೆಜಿ ಬೆಳ್ಳಿಗೆ ರೂ. 800 ಏರಿಕೆಯಾಗಿದೆ.

  • ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಒಂದು ಕಿಲೋ ಬೆಳ್ಳಿ ರೂ.74,000 ತಲುಪಿದೆ
  • ಬೆಂಗಳೂರಿನಲ್ಲಿ ಒಂದು ಕಿಲೋ ಬೆಳ್ಳಿ ರೂ. 250 ಏರಿಕೆಯಾಗಿದ್ದು, .72,750ರಲ್ಲಿ ಮುಂದುವರಿಯಲಿದೆ.
  • ಚೆನ್ನೈನಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ ರೂ. 77,000
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ಒಂದು ಕಿಲೋ ಬೆಳ್ಳಿ ರೂ. 77,000ರಷ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!