ಸೀಟುಗಳ ಸಂಖ್ಯೆ ಹೆಚ್ಚಿಸಿ: ಜಮ್ಮ-ಕಾಶ್ಮೀರ ಕುರಿತು ವರದಿ ಸಲ್ಲಿಸಿದ ಡಿಲಿಮಿಟೇಷನ್ ಆಯೋಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡಿಲಿಮಿಟೇಶನ್ ಆಯೋಗವು ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಅಂತಿಮ ವರದಿ ಸಲ್ಲಿಸಿದೆ.
ವರದಿ ಪ್ರಕಾರ, ವಿಧಾನಸಭೆ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದ್ದು, ಕಾಶ್ಮೀರಕ್ಕೆ ಸಂಬಂಧಿಸಿದಂತೆ, 46 ರಿಂದ 47 ಕ್ಕೆ ಸೀಟುಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ ಹಾಗೆ ಜಮ್ಮುವಿನಲ್ಲಿ 37 ರ ಬದಲಿಗೆ 43 ಸ್ಥಾನಗಳನ್ನು ಹೆಚ್ಚಿಸಲು ಸೂಚಿಸಿದ್ದು, ಈಗ ಒಟ್ಟಾರೆ 90 ವಿಧಾನಸಭೆ ಸ್ಥಾನಗಳನ್ನು ಹೊಂದುತ್ತದೆ.
ನ್ಯಾಯಮೂರ್ತಿ (ನಿವೃತ್ತ) ರಂಜನಾ ದೇಸಾಯಿ ನೇತೃತ್ವದಮೂರು ಸದಸ್ಯರ ಡಿಲಿಮಿಟೇಷನ್ ಆಯೋಗವು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಮರುಸಂಘಟಿಸುವ ಅಂತಿಮ ಆದೇಶಕ್ಕೆ ಇಂದು ಸಹಿ ಹಾಕಿದೆ.
ಆದೇಶದ ನಕಲು ಪ್ರತಿ ಹಾಗೂ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹಾಗೂ ಅವುಗಳ ಗಾತ್ರದ ವಿವರದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಬಳಿಕ ಗೆಜೆಟ್ ಅಧಿಸೂಚನೆ ಮೂಲಕ ಆದೇಶ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಆಡಳಿತದ ಕಾಶ್ಮೀರದಲ್ಲಿ ಇನ್ನೂ 24 ಸೀಟುಗಳು ಖಾಲಿ ಇವೆ. ಮೊದಲ ಬಾರಿಗೆ ಪಟ್ಟಿ ಮಾಡಲಾದ ಬುಡಕಟ್ಟುಗಳಿಗೆ ಒಂಬತ್ತು ಸ್ಥಾನಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಮಿತಿಯು ಜಮ್ಮುವಿಗೆ ಆರು ಮತ್ತು ಕಾಶ್ಮೀರಕ್ಕೆ ಒಂದು ಹೆಚ್ಚುವರಿ ಸ್ಥಾನವನ್ನು ಪ್ರಸ್ತಾಪಿಸಿದೆ.
ಸಮಿತಿಯನ್ನು ಮಾರ್ಚ್ 2020 ರಲ್ಲಿ ರಚಿಸಲಾಗಿದ್ದು, ಕಳೆದ ವರ್ಷ ಈ ಸಮಿತಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಇದಾದ ನಂತರ ಫೆಬ್ರವರಿಯಲ್ಲಿ ಕೆಲಸವನ್ನು ಸಂಪೂರ್ಣಗೊಳಿಸಲು ಮತ್ತೆ ಎರಡು ತಿಂಗಳ ವಿಸ್ತರಣೆಯನ್ನು ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!