September 10, 2026
Thursday, September 10, 2026
spot_img

ಧಾರ್ಮಿಕ ಕೇಂದ್ರಗಳತ್ತ ಹೆಚ್ಚಿದ ಭಕ್ತರ ಚಿತ್ತ: ಕೊಲ್ಲೂರು ಮೂಕಾಂಬಿಕಾ ದೇಗುಲದ ಆದಾಯ ಹೆಚ್ಚಳ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲವು 2025-26ನೇ ಸಾಲಿನಲ್ಲಿ ಠೇವಣಿ ಹಾಗೂ ಉಳಿತಾಯ ಮೊತ್ತ ಹೊರತುಪಡಿಸಿ 84,00,59,189.83 ಕೋ. ರೂ. ಆದಾಯ ಗಳಿಸಿದೆ. ಈ ಮೂಲಕ ಕಳೆದ ಬಾರಿಗಿಂತ 13 ಕೋಟಿ ರೂ. ಹೆಚ್ಚಳ ಆದಾಯ ಸಂಗ್ರಹವಾಗಿದೆ.

2023- 24ರಲ್ಲಿ 68,23,06,285 ರೂ. ಆದಾಯ, 26,59,12,715 ರೂ. ನಿವ್ವಳ ಉಳಿತಾಯ, 168,48,76,316 ರೂ. ನಿಶ್ಚಿತ ಠೇವಣಿ ಹೊಂದಿದ್ದು, 2024-25 ರಲ್ಲಿ 71,93,37,864 ರೂ. ಆದಾಯ, 31,35,18,212 ರೂ. ನಿವ್ವಳ ಉಳಿತಾಯ, 200,83,64,755 ರೂ. ನಿಶ್ಚಿತ ಠೇವಣಿ ಹೊಂದಿದೆ. ಇನ್ನು 2025-26ರಲ್ಲಿ ದೇಗುಲವು 32,75,67,386 ರೂ. ನಿವ್ವಳ ಉಳಿತಾಯ, 229,82,32,074 ರೂ. ನಿಶ್ಚಿತ ಠೇವಣಿ ಹೊಂದಿದೆ.

ಹರಕೆ ಸೇವೆ, ಕಾಣಿಕೆ ಹುಂಡಿ, ಛತ್ರ, ಕಟ್ಟಡಗಳ ಬಾಡಿಗೆ ದೇಗುಲದ ಆದಾಯದ ಮೂಲಗಳಾಗಿವೆ. ಜೊತೆಗೆ ಭಕ್ತರಿಂದ ಹರಕೆ, ಕಾಣಿಕೆ ರೂಪದಲ್ಲಿ ಚಿನ್ನ ಬೆಳ್ಳಿ ಕೂಡ ಸಂದಾಯವಾಗಿದೆ. ಅಲ್ಲದೇ ತುಲಾಭಾರ, ಚಂಡಿಕಾಯಾಗ, ಅನ್ನದಾಸೋಹಕ್ಕೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಪಾವತಿಯಾಗಿದೆ .

ದೇವಳದ ವಸತಿಗೃಹದಿಂದ ಉತ್ತಮ ಆದಾಯ ಲಭಿಸುತ್ತಿದ್ದು, ಇದೀಗ ನೂತನ ವಸತಿಗೃಹ ನಿರ್ಮಾಣಕ್ಕೆ ಸರ್ಕಾರದ ಅನುಮತಿ ದೊರಕಿದೆ. ದೇಗುಲದ ಸಮಗ್ರ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವಲ್ಲಿ ಭಕ್ತರಿಗೆ ಸಕಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !