ಹೊಸದಿಗಂತ ವರದಿ, ಹಾಸನ:
ಹಾಸನ ಜಿಲ್ಲೆಯಲ್ಲಿ ಹೆಚ್ಚಿದ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಒಂದೇ ರಾತ್ರಿ ಬೆಲೆ ಬಾಳುವ ನಾಲ್ಕು ಮೇಕೆಗಳನ್ನು ಚಿರತೆ ಕೊಂದಿರುವ ಘಟನೆ ಹಾಸನ ತಾಲ್ಲೂಕಿನ, ಜೋಡಿಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ ಗ್ರಾಮದೊಳಗೆ ದಾಳಿ ಮಾಡಿರುವ ಚಿರತೆ ಗ್ರಾಮದ ರಂಗೇಗೌಡ ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೂರು ಮೇಕೆಗಳನ್ನು ಕೊಂದು ಹಾಕಿದೆ. ನಂತರ ಇದೇ ಗ್ರಾಮದ ವೆಂಕಟೇಗೌಡ ಎಂಬುವವರ ಕೊಟ್ಟಿಗೆಗೆ ದಾಳಿ ಮಾಡಿರುವ ವ್ಯಾಗ್ರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಯ ಮೇಳೇದಲಿ ನಡೆಸಿದೆ .
ನಾಲ್ಕು ಮೇಕೆಗಳನ್ನು ಕೊಂದು, ಒಂದನ್ನು ಹೊತ್ತೊಯ್ದಿರುವ ಚಿರತೆ ಕಳೆದ ಹದಿನೈದು ದಿನಗಳ ಹಿಂದೆ ಎರಡು ನಾಯಿಗಳನ್ನು ಹೊತ್ತೊಯ್ದು ತಿಂದು ಹಾಕಿತ್ತು. ಹಗಲು ವೇಳೆ ರೈತರ ಜಮೀನಿನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.