ನಮ್ಮ ಗುರಿ ಹಾಸನದಿಂದ ಕಾಂಗ್ರೆಸ್‌ ಅನ್ನು ದೂರ ಮಾಡುವುದು: ಪ್ರಜ್ವಲ್ ರೇವಣ್ಣ

ಹೊಸದಿಗಂತ ವರದಿ, ಹಾಸನ:

ನಮ್ಮ ಗುರಿ ಇರೋದು ಕಾಂಗ್ರೆಸ್‌ನ್ನು ಹಾಸನದಿಂದ ದೂರ ಮಾಡಬೇಕು. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡಿ ದೇವೇಗೌಡರ ಕೈ ಬಲಪಡಿಸಬೇಕು ಎನ್ನುವುದಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ನಗರದಲ್ಲಿ ವಕೀಲರ ಸಂಘದಲ್ಲಿ ಮತಯಾಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಒಂದು ಸೀಟ್ ಹೆಚ್ಚುವರಿಯಾಗಿ ಕೇಳುತ್ತಿದ್ದೇವೆ. ಅದರ ಬಗ್ಗೆ ಚರ್ಚೆ ಆಗುತ್ತೆ, ಚರ್ಚೆ ಆದಮೇಲೆ ಎಲ್ಲಾ ಸರಿ ಹೋಗುತ್ತೆ, ಏನು ತೊಂದರೆ ಇಲ್ಲ ಎಂದರು.

ಹಾಸನದಲ್ಲಿ ಬಿಜೆಪಿ ನಾಯಕರ ವಿರೋಧ ನನ್ನ ಗಮನಕ್ಕೆ ಬಂದಿಲ್ಲ, ನನ್ನ ಗಮನಕ್ಕೆ ಬಂದರೆ ಚರ್ಚೆ ಮಾಡುವೆ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತ ಇದ್ದೀವಿ. ಬಿಜೆಪಿಯ ಹಿರಿಯ ಮುಖಂಡರು, ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ನಾನು ಕೂಡ ಯಡಿಯೂರಪ್ಪ ಸಾಹೇಬರ ಸಮಯ ಕೇಳಿ ನಾಳೆ, ನಾಡಿದ್ದರೊಳಗೆ ಭೇಟಿ ಮಾಡುವೆ. ಎಲ್ಲರೂ ಒಂದೇ ವಿಶ್ವಾಸದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ದೇವೇಗೌಡರು ಕೇಂದ್ರದಿoದ ಬಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಕುಳಿತು ಮಾತನಾಡಿ ಸೀಟು ಹಂಚಿಕೆ ಬಗ್ಗೆ ಚರ್ಚಿಸಲಿದ್ದಾರೆ ನಮ್ಮ ಗುರಿ ಇರೋದು ಕಾಂಗ್ರೆಸ್‌ನ್ನು ಹಾಸನದಿಂದ ದೂರ ಮಾಡಬೇಕು. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡಿ ದೇವೇಗೌಡರ ಕೈ ಬಲಪಡಿಸಬೇಕು ಎನ್ನುವುದಾಗಿದೆ. ಜಿಲ್ಲೆಯ ಅಭಿವೃದ್ಧಿಗೋಸ್ಕರ ಎಲ್ಲಾ ರೀತಿ ಶ್ರಮಿಸುತ್ತೇವೆ ಎಂದರು.

ಮoಡ್ಯದಿoದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಮ್ಮ ಹತ್ತಿರ ಮಾಹಿತಿ ಇಲ್ಲ. ಅದನ್ನು ಮಂಡ್ಯದ ಜನ ತೀರ್ಮಾನ ಮಾಡ್ತಾರೆ. ಅಲ್ಲಿಯ ಕಾರ್ಯಕರ್ತರ ಒತ್ತಡ ಕೂಡ ಇದೆ. ಅವರೆಲ್ಲರೂ ಏನು ಅಭಿಪ್ರಾಯ ವ್ಯಕ್ತಪಡಿಸುತ್ತಾರೋ, ದೇವೇಗೌಡರು ಏನು ಸೂಚಿಸಿತ್ತಾರೋ ಅದರಂತೆ ಕುಮಾರಣ್ಣ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದರ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ತಿಳಿಸುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!