ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಹೆಚ್ಚುತ್ತಿರುವ ಅಪಘಾತಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ಮೂವರು ತಜ್ಞರನ್ನೊಳಗೊಂಡ ವಿಶೇಷ ಸಮಿತಿ ಮೊದಲ ಹಂತದ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ.
ವಿಶೇಷ ಸಮಿತಿ ಅಪಘಾತದ ಸ್ಥಳ, ಸಾವು ನೋವು ಹೆಚ್ಚಾದ ಕಡೆ ಭೇಟಿ ನೀಡಿ ವಾಹನದ ವೇಗ, ಟೆಕ್ನಿಕಲ್ ರೀಸನ್, ರಸ್ತೆ ತಿರುವು, ರಸ್ತೆ ಅನುಪಾತ ಕುರಿತು ಗೌಪ್ಯವಾಗಿ ಮಾಹಿತಿಯನ್ನು ಸಂಗ್ರಹಿದೆ. ತಜ್ಞರ ತಂಡ ಪೊಲೀಸರು, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದೆ. ಒಟ್ಟು ಮೂರು ಹಂತಗಳಲ್ಲಿ ಪರಿಶೀಲನೆ ನಡೆಯಲಿದ್ದು, ಇಂದು (ಜು.19) ಎರಡನೇ ಹಂತದ ಪರಿಶೀಲನೆ ನಡೆಸುತ್ತಿದೆ.
ಎಕ್ಸ್ಪ್ರೆಸ್ ವೇ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿ 10 ದಿನದೊಳಗೆ ವರದಿ ನೀಡುವಂತೆ ಸಮಿತಿಗೆ ಪ್ರಾಧಿಕಾರ ಸೂಚಿಸಿದೆ. ಅಲ್ಲದೇ ಕಳೆದ 9 ತಿಂಗಳಿನಲ್ಲಿ ಎಕ್ಸ್ಪ್ರೆಸ್ ಹೈವೇಯಲ್ಲಿ 550ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ ಮೃತಪಟ್ಟವರ ಬಗ್ಗೆ ಮಾಹಿತಿ ನೀಡುವಂತೆಯೂ ಪ್ರಾಧಿಕಾರ ಆದೇಶಿಸಿದೆ.