ಇದು ದರ್ಪ, ದಬ್ಬಾಳಿಕೆ, ದುರಹಂಕಾರದ ಸರ್ಕಾರ: ಬಿಜೆಪಿ ಶಾಸಕರ ಅಮಾನತಿಗೆ ಎಚ್‌ಡಿಕೆ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

10 ಮಂದಿ ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಿದ ಘಟನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದು, ಇದು ದರ್ಪ, ದಬ್ಬಾಳಿಕೆ ಹಾಗೂ ದುರಹಂಕಾರದ ಸರ್ಕಾರ ಎಂದು ಟೀಕಿಸಿದ್ದಾರೆ.

ಸ್ಪೀಕರ್ ಉದ್ದೇಶ ಪೂರ್ವಕವಾಗಿ ಶಾಸಕರನ್ನ ಅಮಾನತು ಮಾಡಿದ್ದಾರೆ. ಹುಡುಗಾಟಿಕೆ ರೀತಿಯಲ್ಲಿ ಸಿಎಂ ಸನ್ನೆ ಮೇರೆಗೆ ಸ್ಪೀಕರ್ ಮಾಡಿದ್ದಾರೆ. ಪೀಠದಲ್ಲಿ ದಲಿತರು ಕುಳಿತು ಕೊಂಡಿದ್ದಾರೆ ಅನ್ನೋ ಕಾಂಗ್ರೆಸ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಕ್ಷುಲ್ಲಕ ‌ಕೀಳು ಮಟ್ಟದ ಅಭಿರುಚಿ. ದಲಿತರ ಅನುಕುಂಪ ಪಡೆಯಲು ಈ ರೀತಿ ಮಾಡ್ತಾ ಇದಾರೆ. ಅ ಪೀಠದಲ್ಲಿ ‌ಕುಳಿತಿರೋರು ಉಪ ಸಭಾಧ್ಯಕ್ಷರು ಅವರಿಗೆ ಅದಂತ ಗೌರವವಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

ಕಳೆದ ಎರಡು ದಿನಗಳ ಕಾಂಗ್ರೆಸ್‌ ಪಕ್ಷದ ನಾಯಕತ್ವದಲ್ಲಿ ಮಹಾಘಟಬಂದನ್‌ ಮೂಲಕ ರಾಜಕೀಯದ ಸಭೆ ನಡೆದಿದೆ. ಆದರೆ, ಈ ಸಭೆಗೆ ರಾಜ್ಯದ ಹಿರಿಯ ಅಧಿಕಾರಿಗಳನ್ನು ಗುಲಾಮರ ರೀತಿಯಲ್ಲಿ ನಡೆಸಿಕೊಂಡಿದೆ. ದೇಶದ ಹಲವಾರು ಭಾಗದಿಂದ ಬಂದಿದ್ದ ಆಹ್ವಾನಿತರಿಗೆ ಐಎಎಸ್‌ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದು ಹಿಂದೆಂದೂ ಆಗಿರಲಿಲ್ಲ. ಇದು ಅವರ ದರ್ಪ, ದಬ್ಬಾಳಿಕೆಯನ್ನು ತೋರಿಸುತ್ತಿದೆ. ಈ ಮೂಲಕ ಸರ್ಕಾರಹಿರಿಯ ಅಧಿಕಾರಿಗಳನ್ನು ಪಕ್ಷಕ್ಕಾಗಿ ದುರ್ಬಳಕೆ ಮಾಡಿಕೊಂಡಿದೆ ಎಂದು ಟೀಕಿಸಿದರು.

ಈ ಕುರಿತು ಸದನದಲ್ಲಿ ವಿರೋಧ ಪಕ್ಷಗಳು ಚರ್ಚೆ ಪ್ರಾರಂಭ ಮಾಡಿದ್ದವು. ಆದರೆ, ಐದೇ ನಿಮಿಷದಲ್ಲಿ ಈ ಉಲ್ಲಂಘನೆಯನ್ನು ಒಪ್ಪಿಕೊಂಡಿದ್ದರೆ, ನಮ್ಮಿಂದ ತಪ್ಪಾಗಿದೆ ಎಂದು ಸರ್ಕಾರ ಹೇಳಿದ್ದರೆ ಮುಗಿದು ಹೋಗ್ತಿತ್ತು. ಆದರೆ, ದುರಹಂಕಾರದಿಂದ ನಾವು ಮಾಡಿದ್ದೇ ಸರಿ ಎನ್ನುವ ದರ್ಪಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರ ಇದ್ದಂತ ಸಂದರ್ಭದಲ್ಲಿ ನಾನು ಕೂಡ ಐಎಎಸ್‌ ಅಧಿಕಾರಿಗಳನ್ನು ಆಹ್ವಾನಿತರಿಗೆ ನಿಯೋಜನೆ ಮಾಡಿದ್ದೆ ಎಂದು ಸಿದ್ಧರಾಮಯ್ಯ ಖಾಲಿ ಬೆಂಚ್‌ಗೆ ಹೇಳುತ್ತಿದ್ದಾರೆ. ನಾವು ಯಾವುದೇ ರೀತಿ ಗಣ್ಯರಿಗೆ ಭದ್ರತೆ ಕೊಡಲು ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗಣ್ಯರನ್ನ ಸ್ವಾಗತಿಸಲು ಅಧಿಕಾರಿಗಳನ್ನ ಬಳಸಿಕೊಂಡಿಲ್ಲ. ಗಣ್ಯರನ್ನ ರೀಸಿವ್ ಮಾಡಿಕೊಳ್ಳಲು ಐಎಎಸ್‌ ಅಧಿಕಾರಿಗಳನ್ನು ಬಳಸಿಲ್ಲ. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಯಾಗಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ‌ಮಾಡಿಲ್ಲ ಎಂದು ತಿರುಗೇಟು ನೀಡಿದರು. .

ವಿರೋಧ ಪಕ್ಷಗಳ ಬಲ್ಡೋಜ್ ಮಾಡಲು ಹೊರಟಿರೋದು ಸರ್ಕಾರದ ಉದ್ಧಟತನ. ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆ ಮಾಡಿದೆ. ಬಿಜೆಪಿ ನಾವು ಸೇರಿ ಹೋರಾಟ ಮಾಡಲಿದ್ದೇವೆ. ಕೆಲವು ಮಂತ್ರಿಗಳು ಶಾಸಕರು ಈಗಾಗಲೇ ನಮ್ಮನ್ನು ಮುಗಿಸುವುದಾಗಿ ಸದನದಲ್ಲಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!