ಹೆಚ್ಚುತ್ತಿರುವ ಜೀವ ಬೆದರಿಕೆ: ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಈಗಾಗಲೇ ಮುಂಬೈ ಪೊಲೀಸರು ಭದ್ರತೆಯನ್ನೂ ಒದಗಿಸಿದ್ದಾರೆ.

ಇದರ ನಡುವೆ ಸಲ್ಮಾನ್ ಖಾನ್ ಪ್ರಯಾಣಕ್ಕಾಗಿ ಗರಿಷ್ಠ ಸುರಕ್ಷತೆಯ ಬುಲೆಟ್ ಪ್ರೂಫ್ ನಿಸಾನ್ ಪ್ಯಾಟ್ರೋಲ್ ಕಾರು ಆಮದು ಮಾಡಿಕೊಂಡಿದ್ದಾರೆ. ನಿಸಾನ್ ಪ್ಯಾಟ್ರೋಲ್ ಕಾರು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೀಗಾಗಿ ವಿದೇಶಗಳಿಂದ ಈ ಕಾರು ಆಮದು ಮಾಡಿಕೊಂಡಿದ್ದಾರೆ.

ಇದು ಸಂಪೂರ್ಣ ಬುಲೆಟ್ ಪ್ರೂಫ್ ಕಾರಾಗಿದೆ. ಕಾರಿನ ಯಾವುದೇ ಭಾಗದಿಂದ ಗುಂಡು ಹಾರಿಸಿದರೂ ಒಳಗಿರುವ ಪ್ರಯಾಣಿಕರಿಗೆ ಯಾವುದೇ ಅಪಾಯವಿಲ್ಲ. ಕಾರಿನ ಚಕ್ರಗಳು ಯಾವುದೇ ಅಪಾಯವನ್ನು ತಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಕಾರಿನ ವಿಂಡೋಗೆ 78 mm ಗಾಜು ಬಳಸಲಾಗುತ್ತದೆ. ಇದರಿಂದ ಕಾರಿನ ಗಾಜಿಗೆ ಗುಂಡು ಹೊಡೆದರೂ ಯಾವುದೇ ಸಮಸ್ಯೆ ಇಲ್ಲ.ಸರ್ಟಿಫೈಟ್ ಬುಲೆಟ್‌ಪ್ರೂಫ್ ಗ್ಲಾಸ್ ಇದಾಗಿದೆ.

ಕಾರಿನ ಫ್ಲೋರ್‌ಗಳು ಬಾಂಬ್ ಸ್ಪೋಟವನ್ನೂ ತಡೆಯುವ ಶಕ್ತಿ ಹೊಂದಿದೆ. ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಸೇರಿದಂತೆ ಕಡಿಮೆ ತೀವ್ರತೆ ಬಾಂಬ್ ಎಸೆದರೂ ತಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಕಾರಿನೊಳಗೆ ಶತ್ರುಗಳಿಂದ ರಕ್ಷಣೆ ಪಡೆಯಲು ಅಥವಾ ಅಪಾಯದ ಪರಿಸ್ಥಿತಿಯಿಂದ ಪಾರಾಗಲು ಶಸ್ತಾಸ್ತ್ರ ಪ್ರತಿರೋಧ ನೀಡಬಲ್ಲ ಫೀಚರ್ಸ್ ಕೂಡ ಇದೆ.

ನಿಸಾನ್ ಪ್ಯಾಟ್ರೋಲ್ ಕಾರು SUV ಕಾರಾಗಿದೆ. 5.6 ಲೀಟರ್ v8 ಪೆಟ್ರೋಲ್ ಎಂಜಿನ್ ಹೊಂದಿದೆ. 405hp ಪವರ್ ಹಾಗೂ 560Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ನೂತನ ನಿಸಾನ್ ಪ್ಯಾಟ್ರೋಲ್ ಕಾರಿನ ಬೆಲೆ AED 206,000. ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದರೆ ಸರಿಸುಮಾರು 46 ಲಕ್ಷ ರೂಪಾಯಿ. ಆದರೆ ಈ ಕಾರು ಭಾರತಕ್ಕೆ ಆಮದು ಮಾಡಿಕೊಳ್ಳಬೇಕು. ಆಮದು ಸುಂಕ ದುಬಾರಿಯಾಗಲಿದೆ. ಬಳಿಕ ಆಮದು ಕಾರಿನ ರಿಜಿಸ್ಟ್ರೇಶನ್ ಫೀ, ವಿಮೆ ಸೇರಿದರೆ ಸರಿಸುಮಾರು 1 ಕೋಟಿ ರೂಪಾಯಿ ಆಗಲಿದೆ.

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಪ್ರತಿ ದಿನ ಜೀವಬೆದರಿಕೆಯಿಂದಲೇ ದಿನದೂಡುವಂತಾಗಿದೆ. ಒಂದೆಡೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರೆ, ಮತ್ತೊಂದೆಡೆ ಮುಂಬೈ ಪೊಲೀಸರು, ಸಲ್ಮಾನ್ ಕುಟುಂಬಸ್ಥರು ಬೆದರಿಕೆ ಪತ್ರ, ಫೋನ್, ಇಮೇಲ್ ಸ್ವೀಕರಿಸಿದ್ದಾರೆ. ಹೀಗಾಗಿ ಬುಲೆಟ್‌ಫ್ರೂಪ್ ಕಾರು ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!