ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ: ರೈಲುಗಳಿಗೆ ಇಲಾಖೆಯಿಂದ ಹೆಚ್ಚುವರಿ ಬೋಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಗಮನಿಸಿರುವ ರೈಲ್ವೆ ಇಲಾಖೆ ಕೆಲವು ರೈಲುಗಳಲ್ಲಿ ತಾತ್ಕಾಲಿಕ ಹೆಚ್ಚುವರಿ ಬೋಗಿ ಸೇರ್ಪಡೆಗೊಳಿಸಿದೆ.

ರೈಲು (ಸಂಖ್ಯೆ 16603, 16604) ಮಂಗಳೂರು ಸೆಂಟ್ರಲ್ – ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್‌ಗೆ ಮಾ. ೨೭ ರಿಂದ ೩೧ ರವರೆಗೆ ಮಂಗಳೂರಿನಿಂದ ತಿರುವನಂತಪುರಂಗೆ ಹಾಗೂ ಮಾ. 28ರಿಂದ ಏ. 1ರವರೆಗೆ ತಿರುವನಂತಪುರಂನಿಂದ ಮಂಗಳೂರಿಗೆ ಒಂದು ಎಸಿ 3-ಟೈರ್ ಬೋಗಿ ಹೆಚ್ಚಿಸಲಾಗಿದೆ.

ಮಾ. 27, 29 ಮತ್ತು 31ರಂದು ರೈಲು ಸಂಖ್ಯೆ 16348 ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ಮತ್ತು ಮಾ. 28, 30 ಮತ್ತು 01ರಂದು ತಿರುವನಂತಪುರದಿಂದ ಹೊರಡುವ ಅದೇ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ ಹೆಚ್ಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!