ವಿಜ್ಞಾನ, ತಂತ್ರಜ್ಞಾನಕ್ಕೆ ಸವಾಲೊಡ್ಡುವ ಅದೆಷ್ಟೋ ಅದ್ಭುತ, ಅಚ್ಚರಿಯ ತಾಣಗಳು, ದೇವಾಲಯಗಳು ಇಂದಿಗೂ ನಮ್ಮ ದೇಶದಲ್ಲಿವೆ.
ಅದೇ ರೀತಿ ಭಾರತದಲ್ಲಿ ಒಂದೇ ರೇಖಾಂಶದಲ್ಲಿ ನೆಲೆಗೊಂಡಿರುವ ಎಂಟು ಪ್ರಾಚೀನ ಶಿವ ದೇವಾಲಯಗಳಿವೆ. ಈ ದೇವಾಲಯಗಳು ಉತ್ತರದಿಂದ ದಕ್ಷಿಣಕ್ಕೆ ಒಂದು ರೇಖೆಯಲ್ಲಿ ಜೋಡಿಸಲ್ಪಟ್ಟಿವೆ ಎಂದು ಹೇಳಲಾಗುತ್ತದೆ, ಮತ್ತು ಅವುಗಳ ನಡುವಿನ ಅಂತರವು ಯೋಗಿಕ್ ಲೆಕ್ಕಾಚಾರಗಳನ್ನು ಬಳಸಿ ನಿರ್ಧರಿಸಲಾಗಿದೆ ಎಂದು ನಂಬಲಾಗಿದೆ.
ಹಾಗಿದ್ರೆ ಒಂದೇ ರೇಖಾಂಶದಲ್ಲಿ ನೆಲೆಗೊಂಡಿರುವ ಪ್ರಾಚೀನ ಶಿವ ದೇವಾಲಯಗಳು ಯಾವುವುದು ಎಂಬುದು ಗೊತ್ತಾ?
ಕೇದಾರನಾಥ (ಉತ್ತರಾಖಂಡ)
ಕಾಳೇಶ್ವರ ಮುಕ್ತೇಶ್ವರ ಸ್ವಾಮಿ ದೇವಸ್ಥಾನ (ತೆಲಂಗಾಣ)
ಶ್ರೀ ಕಾಳಹಸ್ತಿ ದೇವಸ್ಥಾನ (ಆಂಧ್ರ ಪ್ರದೇಶ)
ಏಕಾಂಬರೇಶ್ವರ ದೇವಸ್ಥಾನ (ತಮಿಳುನಾಡು)
ಜಂಬುಕೇಶ್ವರ ದೇವಸ್ಥಾನ (ತಮಿಳುನಾಡು)
ಅಣ್ಣಾಮಲೈಯಾರ್ ದೇವಸ್ಥಾನ (ತಮಿಳುನಾಡು)
ನಟರಾಜ ದೇವಸ್ಥಾನ (ತಮಿಳುನಾಡು)
ರಾಮನಾಥಸ್ವಾಮಿ ದೇವಸ್ಥಾನ (ತಮಿಳುನಾಡು)
ಈ ದೇವಾಲಯಗಳು 79° ಪೂರ್ವ ರೇಖಾಂಶದಲ್ಲಿವೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಈ 8 ದೇವಾಲಯಗಳಲ್ಲಿ ಐದು ದೇವಾಲಯಗಳು ಪಂಚಭೂತಗಳ ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶವನ್ನು ಸಂಕೇತಿಸುತ್ತದೆ.
ಈ ದೇವಾಲಯಗಳನ್ನು ಪ್ರಾಚೀನ ಕಾಲದಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೆ ಹೇಗೆ ಒಂದೇ ರೇಖಾಂಶದಲ್ಲಿ ನಿರ್ಮಿಸಲಾಯಿತು ಎಂಬುದು ಇಂದಿಗೂ ಒಂದು ರಹಸ್ಯವಾಗಿದೆ. ಈ ದೇವಾಲಯಗಳು ಶಿವನಿಗೆ ಸಮರ್ಪಿತವಾಗಿವೆ ಮತ್ತು ಪ್ರಮುಖ ಯಾತ್ರಾ ಸ್ಥಳಗಳಾಗಿವೆ.