August 26, 2026
Wednesday, August 26, 2026
spot_img

IND vs ENG | ಇತಿಹಾಸ ಬರೆದ ಇಂಗ್ಲೆಂಡ್ ಬ್ಯಾಟಿಂಗ್: ಭಾರತದ ಮುಂದಿದೆ 388 ರನ್‌ಗಳ ಸವಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳ ಭರ್ಜರಿ ಪ್ರದರ್ಶನದ ನೆರವಿನಿಂದ ಲಾರ್ಡ್ಸ್ ಮೈದಾನದಲ್ಲಿ ದಾಖಲೆ ಮೊತ್ತ ಕಲೆಹಾಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯರು 387 ರನ್‌ಗಳ ಬೃಹತ್ ಮೊತ್ತ ದಾಖಲಿಸಿ, ಭಾರತದ ಮುಂದೆ 388 ರನ್‌ಗಳ ಗೆಲುವಿನ ಗುರಿ ಇಟ್ಟಿದ್ದಾರೆ.

ದಾಖಲೆ ಮೊತ್ತ

ಬೆನ್ ಡಕೆಟ್ 141, ಜೇಕಬ್ ಬೆಥೆಲ್ 91, ಜೋ ರೂಟ್ ಅಜೇಯ 73 ಹಾಗೂ ಜೋಸ್ ಬಟ್ಲರ್ ಅಜೇಯ 41 ರನ್‌ಗಳ ಕೊಡುಗೆಯಿಂದ ಇಂಗ್ಲೆಂಡ್ 387 ರನ್‌ಗಳಿಗೆ ತಲುಪಿತು. ಇದು ಲಾರ್ಡ್ಸ್ ಮೈದಾನದಲ್ಲಿ ಏಕದಿನ ಕ್ರಿಕೆಟ್‌ನ ಹೊಸ ಗರಿಷ್ಠ ತಂಡದ ಮೊತ್ತವಾಗಿದೆ.

ಇದನ್ನೂ ಓದಿ:

ಭಾರತದ ಹೆಸರಿನಲ್ಲೇ ಚೇಸ್ ದಾಖಲೆ

ಲಾರ್ಡ್ಸ್‌ನಲ್ಲಿ ಅತ್ಯಧಿಕ ರನ್ ಬೆನ್ನಟ್ಟಿದ ದಾಖಲೆ ಇನ್ನೂ ಭಾರತದ ಹೆಸರಿನಲ್ಲಿದೆ. 2002ರ ನ್ಯಾಟ್‌ವೆಸ್ಟ್ ಫೈನಲ್‌ನಲ್ಲಿ 326 ರನ್‌ಗಳ ಗುರಿ ತಲುಪಿದ್ದ ಭಾರತ, ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಅವರ ಅಮೋಘ ಜೊತೆಯಾಟದ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿತ್ತು.

ಕಠಿಣ ಸವಾಲು

ಈಗ ಭಾರತ ಎದುರು 388 ರನ್‌ಗಳ ಗುರಿಯಿದ್ದು, ಲಾರ್ಡ್ಸ್ ಇತಿಹಾಸದಲ್ಲೇ ಅತಿ ದೊಡ್ಡ ಚೇಸ್ ಸಾಧಿಸಿ ಹೊಸ ದಾಖಲೆ ಬರೆಯುವ ಅವಕಾಶ ತಂಡದ ಮುಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !