Saturday, August 13, 2022

Latest Posts

ಸತತ 5 ಇನ್ನಿಂಗ್ಸ್‌ನಲ್ಲಿ 20 ರನ್ ಗಡಿದಾಟದ ಕೊಹ್ಲಿ: ಸಾಮಾಜಿಕ ತಾಣಗಳಲ್ಲಿ ಟ್ರೋಲಿಗರ ತರಾಟೆ!

ಹೊಸಗಂತ ಡಿಜಿಟಲ್ ಡೆಸ್ಕ್‌ 
ಕಳೆದ ಕೆಲ ದಿನಗಳಿಂದ ಕಳಪೆ ಫಾರ್ಮ್‌ ನಲ್ಲಿರುವ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ. ಭಾನುವಾರ ಇಂಗ್ಲೆಂಡ್‌ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. 22 ಎಸೆತಗಳಲ್ಲಿ 17 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವಿರಾಟ್‌, ರೀಸ್ ಟೋಪ್ಲೆ ಅವರ ಆಫ್ ಸ್ಟಂಪ್ ಪಿಚ್ ಎಸೆತ ಕೆಣಕಿ ಜೋಸ್ ಬಟ್ಲರ್ ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.
8, 18, 0, 16, 17… ಇದು ವಿರಾಟ್ ಕೊಹ್ಲಿ ತಮ್ಮ ಕೊನೆಯ ಐದು ಏಕದಿನ ಇನ್ನಿಂಗ್ಸ್‌ಗಳಲ್ಲಿ ಗಳಿಸಿದ ಸ್ಕೋರ್.‌ ಅವರ ವೃತ್ತಿಜೀವನದಲ್ಲಿ 20 ರನ್‌ಗಳನ್ನು ಸಹ ತಲುಪದೆ ಸತತ ಐದು ಇನ್ನಿಂಗ್ಸ್‌ಗಳನ್ನು ಆಡಿದ್ದು ಇದೇ ಮೊದಲು.
ವಿರಾಟ್‌ ಕೊಹ್ಲಿ ಸತತ ವೈಫಲ್ಯದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕೆಲ ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್‌ ಅಭಿಮಾನಿಗಳು ಕೊಹ್ಲಿಯನ್ನು ಭಾರತ ತಂಡದಿಂದ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಕೆಲವು ಅಭಿಮಾನಿಗಳು ಇದು ಕೊಹ್ಲಿಯ ಹಾದಿಯ ಅಂತ್ಯ ಎಂದು ಭಾವಿಸಿದರೆ, ಮತ್ತೆ ಕೆಲವರು ಅವರು ಏಷ್ಯಾ ಕಪ್‌ನಲ್ಲಿ ಬಲವಾಗಿ ಕಮ್‌ ಬ್ಯಾಕ್‌ ಮಾಡಿಲಿದ್ದಾರೆ ಎಂದು ವಾದಿಸುತ್ತಿದ್ದಾರೆ. ವಿರಾಟ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss