Friday, September 30, 2022

Latest Posts

IND vs PAK | ಟೀಂ ಇಂಡಿಯಾ ಪ್ರಮುಖ ವೇಗಿ ಪಾಕ್‌ ವಿರುದ್ಧದ ಪಂದ್ಯಕ್ಕೆ ಡೌಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ  ಇಂದು ನಡೆಯಲಿರುವ ಏಷ್ಯಾಕಪ್​ನಲ್ಲಿ ಸೂಪರ್-‌4 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಟೂರ್ನಿಯ ಲೀಗ್‌ ಹಂತದಲ್ಲಿ ಎರಡೂ ತಂಡಗಳು ಎದುರಾಗಿದ್ದಾಗ ಟೀಂ ಇಂಡಿಯಾ 5 ವಿಕೆಟ್​​ಗಳ ರೋಚಕ ಜಯ ದಾಖಲಿಸಿತ್ತು. ಆದರೆ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಸಮಸ್ಯೆಯೊಂದು ಎದುರಾಗಿದೆ.
ಟೀಂ ಇಂಡಿಯಾ ವೇಗದ ಬೌಲರ್ ಅವೇಶ್ ಖಾನ್ ಅನಾರೋಗ್ಯಕ್ಕೆ ಒಳಗಾಗಿದ್ದು, ಪಾಕ್‌ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿದೆ. ವೇಗಿ ಅವೇಶ್ ಖಾನ್ ಅವರು ಅಸ್ವಸ್ಥರಾಗಿದ್ದರಿಂದ ಶನಿವಾರದ ಪ್ರಾಕ್ಟಿಸ್ ಸೆಷನ್‌ನಲ್ಲಿ ಭಾಗವಹಿಸಲಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ.
“ಅವೇಶ್ ಜ್ವರದಿಂದ ಸ್ವಲ್ಪ ಮಟ್ಟಿಗೆ ಅಸ್ವಸ್ಥರಾಗಿದ್ದಾರೆ. ವೈದ್ಯರು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಆದರೆ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿಲ್ಲ. ಪಾಕ್‌ ವಿರುದ್ಧದ ಪಂದ್ಯದ ವೇಳೆಗೆ ಸಂಪೂರ್ಣ ಚೇತರಿಸಿಕೊಂಡರೆ ಮಾತ್ರವೇ ಆಡುತ್ತಾರೆ ಎಂದು ದ್ರಾವಿಡ್‌ ಹೇಳಿದ್ದಾರೆ.
ಆದ್ದರಿಂದ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ 2 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಗಳಿವೆ. ಗಾಯಾಳು ರವೀಂದ್ರ ಜಡೇಜಾ ಸ್ಥಾನದಲ್ಲಿ ದೀಪಕ್ ಹೂಡಾರನ್ನು ಕಣಕ್ಕಿಳಿಸಿ, ಅವೇಶ್ ಖಾನ್ ಬದಲು ರವಿಚಂದ್ರನ್ ಅಶ್ವಿನ್​ಗೆ ಸ್ಥಾನ ಸಿಗುವ ಸಾಧ್ಯತೆಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!