ಹೊಸದಿಗಂತ ಡಿಜಿಟಲ್ ಡೆಸ್ಕ್
ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮೊದಲ ದಿನದ ಮಳೆಗೆ ಬಲಿಯಾಗಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 13.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ಉಸ್ಮಾನ್ ಖ್ವಾಜಾ 19 ರನ್ ನೇಥನ್ ಮೆಕ್‌ಸ್ವೀನಿ 4 ಕ್ರೀಸಿನಲ್ಲಿದ್ದಾರೆ.
ದಿನದಾಟದ ಮೊದಲ ಅವಧಿಯಲ್ಲೇ ಸುರಿದ ಸತತ ಮಳೆಯಿಂದಾಗಿ ಭೋಜನ ವಿರಾಮವನ್ನು ಬೇಗನೇ ತೆಗೆದುಕೊಳ್ಳಲಾಯಿತು. ಎರಡನೇ ಅವಧಿಗೂ ಮಳೆ ಅಡ್ಡಿಯಾಯಿತು. ಅಂತಿಮವಾಗಿ ಟೀ ವಿರಾಮದ ಬಳಿ ಮೊದಲ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.
ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು 1-1ರಲ್ಲಿ ಸಮಬಲಗೊಂಡಿದೆ.