ಎರಡೂವರೆ ವರ್ಷಗಳ ಬಳಿಕ ಮತ್ತೆ ತೆರೆದುಕೊಳ್ಳಲಿದೆ ಭಾರತ-ಭೂತಾನ್ ಗಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಹಿನ್ನೆಲೆ ಸಾಂಕ್ರಾಮಿಕ ನಿಯಂತ್ರಿಸುವುದಕ್ಕಾಗಿ ಮುಚ್ಚಲ್ಪಟ್ಟಿದ್ದ ಅಸ್ಸಾಂ ಗಡಿಯಲ್ಲಿರುವ ಭಾರತ-ಭೂತಾನ್ ಗಡಿ ಬಾಗಿಲು ಸೆ. 23ರಂದು ತೆರೆಯಲಾಗುತ್ತಿದೆ.

ತಾಶಿ ಪೆಂಜೋರ್ ನೇತೃತ್ವದ ಭೂತಾನ್ ನಿಯೋಗವು ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮತ್ತೆ ಭಾರತ-ಭೂತಾನ್ ಗಡಿ ಬಾಗಿಲುಗಳನ್ನು ಸೆ. ೨೩ರಂದು ತೆರವುಗೊಳಿಸಲು ನಿರ್ಧರಿಸಲಾಗಿದೆ.

ಎರಡೂವರೆ ವರ್ಷಗಳ ಬಳಿಕ ಈ ಗಡಿ ಬಾಗಿಲುಗಳನ್ನು ತೆರೆಯಲಾಗುತ್ತಿದೆ. ಸೆ.23ರಿಂದ ವ್ಯಾಪಾರ, ವಾಣಿಜ್ಯ ಮತ್ತು ಅಧಿಕೃತ ಸಾರಿಗೆಗಾಗಿ ತನ್ನ ಗಡಿಗಳನ್ನು ಪುನಃ ತೆರೆಯುವುದಾಗಿ ಭೂತಾನ್ ಸರ್ಕಾರ ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!